” ಇಂಡಿಯಾ ಆರ್ಟ್ ಫೇರ್ India Art Fair ” 15ನೇ ಆವೃತ್ತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವರ್ಷದಿಂದ ವರ್ಷಕ್ಕೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟು ಮಾಡಿಕೊಳ್ಳುವುದರ ಜೊತೆಗೆ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟಿದೆ. ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಫೆಬ್ರವರಿ 1ರಂದು ಆರಂಭವಾದ ಏಷ್ಯಾದ ಬೃಹತ್ ಕಲಾಪ್ರದರ್ಶನಕ್ಕೆ ಮೊದಲ ಎರಡು ದಿನ ಗಣ್ಯಾತಿಗಣ್ಯರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ವರ್ಷಕ್ಕಿಂತಲೂ ಈ ವರ್ಷ ಗಣ್ಯರ ಪಾಲ್ಗೊಳ್ಳುವಿಕೆ ಹೆಚ್ಚಿತ್ತು. ಕಲಾಸಂಗ್ರಹಕಾರರು(Art Collectors/ Buyers) ಉದ್ಯಮಿಗಳು(Businessmen’s) ಆಯೋಜಕರು(promoters), ಕಲಾವಿದರು(Artists), ಕಲಾ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸೆಲೆಬ್ರಿಟಿಗಳು (celebrities) ಪಾಲ್ಗೊಂಡಿದ್ದರು. ಕಡೆಯ ಎರಡು ದಿನ ಸಹಸ್ರಾರು ಸಂಖ್ಯೆಯಲ್ಲಿ ಕಲಾಪ್ರಿಯರ ಸಾಗರವೇ ಹರಿದುಬಂತು.
100ಕ್ಕೂ ಹೆಚ್ಚು ಪ್ರದರ್ಶಕರು 5000ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ದೇಶ-ವಿದೇಶಗಳ ಹಿರಿಯ ಕಲಾವಿದರಿಂದ ಹಿಡಿದು ಕಿರಿಯ ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಇಡೀ ಪ್ರದರ್ಶನದಲ್ಲಿ ಕೆಲವೇ ಕೆಲವು ಗ್ಯಾಲರಿಗಳ ಬೆರಳೆಣಿಕೆಯಷ್ಟು ಕಲಾಕೃತಿಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಕಲಾಕೃತಿಗಳೂ ಬೇರೆ ಬೇರೆ ಕಾರಣಗಳಿಂದ ಆಕರ್ಷಿಸಿದವು. ಒಂದೊಂದು ಕಲಾಕೃತಿಯೂ ಕಲಾವಿದನ ಸೃಜನಶೀಲ ಶಕ್ತಿಯಾಗಿ ಕಾಣಿಸಿತು. ಎಲ್ಲಿಯೂ ನಕಲಿ ಎನ್ನುವ ಭಾವ ಕಾಣಿಸಲಿಲ್ಲ.
ಬಹುತೇಕ ಪ್ರದರ್ಶಕ ಗ್ಯಾಲರಿಗಳು ಸಹಜವಾಗಿ ವಾಣಿಜ್ಯದ ಉದ್ದೇಶದಿಂದಲೇ ಗ್ರಾಹಕರನ್ನು ಆಕರ್ಷಿಸುವಂತಹ ಕಲಾಕೃತಿಗಳನ್ನೇ ಪ್ರದರ್ಶಿಸಿದ್ದವು. ಇದರ ನಡುವೆ ಕೆಲವು ಗ್ಯಾಲರಿಗಳು ಕಲಾವಿದನ ಅಭಿವ್ಯಕ್ತಿ, ಅನುಭವ, ಭಾವನೆಗಳಿಗೆ, ಕಲ್ಪನೆಗಳನ್ನು ಗೌರವಿಸಿ ಅವರ ಎಂದಿನ ಶೈಲಿಯ ಕಲಾಕೃತಿಗಳನ್ನೇ ಪ್ರದರ್ಶಿಸಿಕೊಂಡಿದ್ದವು.
ಅಕ್ರಾಲಿಕ್(acrylic), ತೈಲವರ್ಣ(oil color), ಜಲವರ್ಣ(watercolor), ಮಿಶ್ರವರ್ಣ(mixed color), ಇಂಕ್(ink) ಮತ್ತು ಪ್ರಾಕೃತಿಕ ವರ್ಣಗಳನ್ನು (natural color) ಬಳಸಿ ರಚಿಸಿರುವ ಕಲಾಕೃತಿಗಳು ಒಂದಷ್ಟು ನೋಡುಗರ ಆಕರ್ಷಣೆಯಾದವು. ಶಿಲೆ(stone), ಲೋಹ(ಕಲಾಕೃತಿಗಳು ಶ್ರಶಿಲೆ(mixed stone), ಮಿಶ್ರಲೋಹ(mixed metal), wood(wood), ಫೈಬರ್(fiber) ಸೇರಿದಂತೆ ವಿಭಿನ್ನ ಮಾಧ್ಯಮದ ಶಿಲ್ಪ ಕಲಾಕೃತಿಗಳು (sculptures) ಇನ್ನಷ್ಟು ನೋಡುಗರ ಆಕರ್ಷಣೆಯ ಕೇಂದ್ರವಾಗಿದ್ದವು. ಇವೆಲ್ಲದರ ನಡುವೆ ಒಂದಿಷ್ಟು ಪ್ರತಿಷ್ಟಾಪನಾ, ಕರಕುಶಲ ಕಲಾಕೃತಿಗಳು ಗಮನ ಸೆಳೆದವು.
ಸಮಕಾಲೀನ ಕಲಾಕೃತಿಗಳ ಅಬ್ಬರದ ನಡುವೆಯೂ ಭಾರತೀಯ ಕಲಾಕ್ಷೇತ್ರದಲ್ಲಿ ಸಾಕಷ್ಟು ಧ್ವನಿ ಮಾಡಿರುವ ಶ್ರೇಷ್ಠ ಕಲಾವಿದರ ಕಲಾಕೃತಿಗಳು (indian masters paintings and sculptures) ಪ್ರದರ್ಶನದಲ್ಲಿದ್ದವು. ಅನೇಕ ಗ್ಯಾಲರಿಗಳು ದೇಶದ ಹಿರಿಯ ಕಲಾವಿದರ ಕಲಾಕೃತಿಗಳನ್ನಷ್ಟೇ ಪ್ರದರ್ಶಿಸಿದ್ದವು. ಬಹಳ ಗಮನಾರ್ಹ ಸಂಗತಿಯೇನೆಂದರೆ ಕೆಲವು ಗ್ಯಾಲರಿಗಳು ಪ್ರಯೋಗಾತ್ಮಕ(experimental) ಕಲಾಕೃತಿಗಳಿಗೆ ಒತ್ತು (importance) ನೀಡಿದ್ದವು. ಇನ್ನಷ್ಟು ಗ್ಯಾಲರಿಗಳು ಕಲಾಕೃತಿಗಳ ಗಾತ್ರ ಮತ್ತು ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಿರುವಂತೆ ಕಾಣಿಸಿದವು. ಪರಿಣಾಮ ಗ್ಯಾಲರಿಗಳ ಕಂಪನ (vibe) ನಿರೀಕ್ಷೆಗೂ ಮೀರಿತ್ತು.
ಬಹಳಷ್ಟು ಕಲಾಕೃತಿಗಳಲ್ಲಿ ಈ ಕಾಲಘಟ್ಟದ ಆಗು ಹೋಗುಗಳನ್ನು ಕಲಾವಿದ ಅಭಿವ್ಯಕ್ತಪಡಿಸಿರುವುದನ್ನು ಗಮನಿಸಿದಾಗ ಪ್ರಸ್ತುತತೆಯ ಪ್ರಭಾವ ಎಷ್ಷೆನ್ನುವುದನ್ನು ಗಮನಿಸಬಹುದಾಗಿತ್ತು. ಸಮಕಾಲೀನ ಅಂಶಗಳನ್ನು(elements) ಬಹಳ ಪರಿಣಾಮಕಾರಿಯಾಗಿ ಈ ಕಾಲಘಟ್ಟದ ಕಲಾವಿದರು ದಾಖಲಿಸಲು ಒಲವು ತೋರುತ್ತಿರುವುದು ಗಮನಾರ್ಹ ಸಂಗತಿ.
| ಹೊಸ ಮುಖಗಳ ಪರಿಚಯ |
ಕಳೆದ ಆವೃತ್ತಿಗಳಿಗೆ ಹೋಲಿಕೆ ಮಾಡಿಕೊಂಡರೆ 15ನೇ ಆವೃತ್ತಿಯಲ್ಲಿ ಅನೇಕ ಗ್ಯಾಲರಿಗಳು ಹೊಸ ಮುಖಗಳನ್ನು ಪರಿಚಯಿಸಿದೆ. ಇದುವರೆಗೆ ಇಂಡಿಯಾ ಆರ್ಟ್ ಫೇರ್ ನಲ್ಲಿ ಒಮ್ಮೆಯೂ ಪ್ರದರ್ಶಕರಾಗಿ ಪಾಲ್ಗೊಳ್ಳದ 18 ಗ್ಯಾಲರಿಗಳು ಈ ಬಾರಿ ಇಂಡಿಯಾ ಆರ್ಟ್ ಫೇರ್ ಭಾಗವಾಗಿದ್ದವು.
| Art Fair “Show Stoppers” |
ಸಾಮಾನ್ಯವಾಗಿ ಯಾವುದೇ ಕಲಾ ಪ್ರದರ್ಶನದಲ್ಲಿ ಒಂದೆರಡು ಅಥವಾ ನಾಲ್ಕಾರು ಕಲಾಕೃತಿಗಳು ನೋಡುಗರನ್ನು ಹಿಡಿದು ನಿಲ್ಲಿಸುವ ಗುಣದಿಂದ ಕೂಡಿರುತ್ತವೆ. ಇದನ್ನೇ Show Stoppers ಎಂದು ಪರಿಗಣಿಸಲಾಗುತ್ತದೆ.
| BMW ಹರ್ಷ ; THE i7 ಅನಾವರಣ |
ಇಂಡಿಯಾ ಆರ್ಟ್ ಫೇರ್ ಪ್ರಮುಖ ಪ್ರಾಯೋಜಕರಾದ ಬಿಎಂಡಬ್ಲ್ಯು(BMW) ಸಂಸ್ಥೆ ತನ್ನ ಅತ್ಯಂತ ಜನಪ್ರಿಯ THE i7 ಸರಣಿಯ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿತು. ಕಲೆ ಮತ್ತು ಇಂಡಿಯಾ ಆರ್ಟ್ ಫೇರ್ ಜೊತೆಗಿನ ಉತ್ತಮ ಬಾಂಧವ್ಯಕ್ಕೆ ಬಿಎಂಡಬ್ಲ್ಯು ಸಂಸ್ಥೆ ಹರ್ಷ ವ್ಯಕ್ತಪಡಿಸಿತು.