- ಅಪರೂಪದ ಕಲಾಕೃತಿ ಪ್ರದರ್ಶಿಸಿದ ಕರ್ನಾಟಕ ಚಿತ್ರಕಲಾ ಪರಿಷತ್
ಕರ್ನಾಟಕ ಚಿತ್ರಕಲಾ ಪರಿಷತ್ ಸಂಸ್ಥಾಪಕ, ಹಿರಿಯ ಕಲಾವಿದರಾದ ಪ್ರೊ.ಎಂ.ಎಸ್. ನಂಜುಂಡರಾವ್ ಅವರ ಹೆಸರಲ್ಲಿ ಪ್ರತಿವರ್ಷ ನೀಡಲಾಗುವ ‘ನಂಜುಂಡ ಸಿರಿ’ ಪ್ರೊ. ಎಂ. ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು 2026, ಜುಲೈ 5 ಭಾನುವಾರ ಪ್ರದಾನ ಮಾಡಲಾಯಿತು. ಗುಜರಾತ್ ಮೂಲದ ನವದೆಹಲಿ ನಿವಾಸಿ, ಹಿರಿಯ ಸೆರಾಮಿಕ್, ಶಿಲ್ಪ ಕಲಾವಿದ ಪಿ.ಆರ್. ದರೋಜ್ (P.R. Daroz) ಅವರಿಗೆ ‘ನಂಜುಂಡ ಸಿರಿ’ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು.
ಈ ಹಿನ್ನೆಯಲ್ಲಿ ಪ್ರದರ್ಶಿಸಲಾದ ಕಲಾಕೃತಿಗಳು ಗಮನ ಸೆಳೆಯಿತು. ಒಂದಿಷ್ಟು ಅಪರೂಪದ ಕಲಾಕೃತಿಗಳನ್ನು ನೋಡಲು ಸಾಧ್ಯವಾಯಿತು. ಬಹಳ ವಿಶೇಷವಾಗಿ ದಿವಂಗತ ನಂಜುಂಡರಾವ್ ಅವರು ಕರ್ನಾಟಕ ಚಿತ್ರಕಲಾ ಪರಿಷತ್ ಕಟ್ಟಿಕೊಂಡು ಬಂದಿರುವ ಹೆಜ್ಜೆ ಗುರುತು ನೆನಪಿಸುವ ಛಾಯಾಚಿತ್ರಗಳು ಆಪ್ತವೆನಿಸುವಂತಿವೆ. ನಂಜುಂಡರಾವ್ ಅವರು ಈ ಸಂಸ್ಥೆ ಕಟ್ಟದೇ ಇದ್ದಿದ್ದರೆ ಈ ತಲೆಮಾರಿನ ಕಲಾವಿದರಿಗೆ ಇಷ್ಟು ದೊಡ್ಡ ಪ್ರಮಾಣದ ಗ್ಯಾಲರಿ ಸ್ಥಳಾವಕಾಶ ಇರುತ್ತಿರಲಿಲ್ಲ. ಆ ಹಿರಿಯ ಜೀವದ ಕೊಡುಗೆ ಅಪಾರ, ಸ್ಮರಣೀಯ.
ನೆನಪಿನ ಬುತ್ತಿ ತೆರೆದಿಡುವ ಕಲಾಪ್ರದರ್ಶನ ಜುಲೈ 10ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.
ಯಾರಿವರು ದರೋಜ್?
ಗುಜರಾತ್ ಮೂಲದ ನವದೆಹಲಿ ನಿವಾಸಿ ಸೆರಾಮಿಕ್ ಹಿರಿಯ ಕಲಾವಿದರು ಪಿ. ಆರ್. ದರೋಜ್. ೧೯೪೪ರಲ್ಲಿ ಜನಿಸಿದ ಇವರು ಸುದೀರ್ಘ ೫೦ ವರ್ಷಗಳ ಕಲಾಪಯಣ ನಡೆಸಿದ್ದಾರೆ. ಸಾಕಷ್ಟು ಅನುಭವ ಹೊಂದಿರುವ ಭಾರತದ ಖ್ಯಾತನಾಮರು. ಹೈದರಾಬಾದ್ College of Fine Arts and Architectur ನಲ್ಲಿ ಪದವಿ ಪಡೆದು, ತದನಂತರ ಬರೋಡ M.S. University ಯಲ್ಲಿ ಶಿಲ್ಪಿಯಾಗಿ ಮಾಸ್ಟರ್ಸ್ ಪದವಿಯನ್ನು ಪಡೆದುಕೊಂಡರು. ಸೆರಾಮಿಕ್ ಕಲೆ ಮತ್ತು ಶಿಲ್ಪಿ ಕಲೆಯಲ್ಲಿ ಪರಿಣಿತರು. ಜಿನೀವಾದ International Academy of Ceramics ಪ್ರಶಸ್ತಿ, ಭಾರತ ಸರ್ಕಾರದ HRD Department of Culture ಫೆಲೋಶಿಪ್, ಲಲಿತಕಲಾ ಅಕಾಡೆಮಿಯಿಂದ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ದೇಶ – ವಿದೇಶಗಳಲ್ಲಿ ತಮ್ಮ ಕಲಾಕೃತಿ ಪ್ರದರ್ಶಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.