‘ದೊಡ್ಡ ಚಾಣ’ನ ಬಾಣದ ವೇಗ!

Share This

‘ದೊಡ್ಡ ಚಾಣ’ನ ಬಾಣದ ವೇಗ!

ಗಂಟೆಗೆ ಅಂದಾಜು 250 ರಿಂದ 300 ಕಿ.ಮೀ. ವೇಗ. ಕೆಲವೊಮ್ಮೆ ಇನ್ನೂ ಹೆಚ್ಚು!
ಸುಮ್ಮನೇ ಉಹಿಸಿಕೊಳ್ಳಿ. ಆ ವೇಗದ ತೀವ್ರತೆ ಎಸ್ಟಿರಬಹುದು ಎಂದು. ಖಂಡಿತ ನೀವು ಚಕಿತರಾಗುತ್ತೀರಿ ಸೋಜಿಗ ಸೂಜಿಯಂತೆ ಚುಚ್ಚುತ್ತದೆ.
ಇದು ಸುಳ್ಳಲ್ಲ. ಈ ‘ದೊಡ್ಡ ಚಾಣ'(Peregrine Falcon) ಹಕ್ಕಿಯ ವೇಗ ಅಸ್ಟಿಸ್ಟಲ್ಲ. ಜಗತ್ತಿನಲ್ಲೇ ಅತಿ ವೇಗವಾಗಿ ಹಾರಬಲ್ಲ ಹಕ್ಕಿ.
‘ದೊಡ್ಡ ಚಾಣ’ನಲ್ಲಿ ಕಾಣಬಹುದಾದ ವಿಶೇಷ ಹಾರಾಟದ ವೇಗ. ನೋಡ ನೋಡುತ್ತಿದ್ದಂತೆ ನೋಟದಿಂದಲೇ ಮಾಯವಾಗಿ ಬಿಡುತ್ತದೆ. ವೇಗದ ಮಿತಿಯನ್ನು ಇನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಒಂದು ನಿಮಿಷಕ್ಕೆ ಅಂದಾಜು 4 ರಿಂದ 5 ಕಿ.ಮೀ. ದೂರ ಸಾಗಬಲ್ಲ ಸಾಮರ್ಥ್ಯ ಇದರದು.
‘ದೊಡ್ಡ ಚಾಣ’ ದೊಡ್ಡ ಗಾತ್ರದ ಹಕ್ಕಿ. ಗಿಡುಗನ ಜಾತಿಗೆ ಸೇರಿದ ಈ ಹಕ್ಕಿ ಅಂದಾಜು 15 ರಿಂದ 20 ಇಂಚಿನಸ್ಟು ಉದ್ದವಿರುತ್ತದೆ. ಹೆಣ್ಣು ಹಕ್ಕಿಯ ಗಾತ್ರ ಇನ್ನೂ ಜಾಸ್ತಿ. ಮೇಲ್ನೋಟಕ್ಕೆ ಎಲ್ಲ ಗಿಡುಗನಂತೆ ತೋರಿದರೂ ಉಳಿದೆಲ್ಲ ಹಕ್ಕಿಗಳಿಗಿಂತ ಬಲಿಸ್ಟ ತನ್ನ ಉಗುರುಗಳ ಸಹಾಯದಿಂದಲೇ ತನಗಿಂತ ತೂಕದ ಇನ್ನೊಂದು ಜೀವಿಯನ್ನು ಸುಲಭವಾಗಿ ಹಿಡಿದು ಹಾರುತ್ತದೆ. ಬೇಟೆಗೆ ನಿಸ್ಸೀಮ.
ದೇಹದ ಬಹೇತೆಕ ಭಾಗ ಕಂದು ಮಿಶ್ರಿತ ಕಪ್ಪು ಬಣ್ಣ. ಎದೆ, ಹೊಟ್ಟೆ, ರೆಕ್ಕೆಯ ಇಕ್ಕೆಲಗಳಲ್ಲಿ ಬೆಳ್ಳಗಿನ ಚುಕ್ಕೆಗಳು ಇರುತ್ತವೆ. ಮಾಂಸವನ್ನು ಹರಿದು ತಿನ್ನಲು ಅನುಕೂಲವಾಗುವಂತೆ ಕೊಕ್ಕು ಮುಂದಕ್ಕೆ ಬಾಗಿರುತ್ತದೆ.
ಚಳಿಗಾಲದ ವೇಳೆಯಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿಕೊಂಡು 2-3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಇಲಿ, ಚಿಕ್ಕ ಹಕ್ಕಿಗಳು, ಹಾವು, ಚಿಕ್ಕ ಚಕ್ಕ ಪ್ರಾಣಿಗಳೇ ಈ ಹಕ್ಕಿಯ ಆಹಾರ.


Share This

Leave a Reply

Your email address will not be published. Required fields are marked *