ಜಗಳ ಗಂಟಿ ‘ಕೋಮಲ ಬದನಿಕೆ’

Share This

ಹಲವರಿಗೆ ಹೂವಿನ ಮೇಲೆ ವಿಪರೀತ ವ್ಯಾಮೋಹ. ಅವರಲ್ಲೇ ಕೆಲವರು ದಿನ ಬೆಳಗಾದರೆ ಹೂವಿಗಾಗಿ ಇನ್ನೊಬ್ಬರ ಮನೆಯ ಬೇಲಿ ಹಾರಿ ಕಿತ್ತು ತರುವವರೂ ಇದ್ದಾರೆ.
ಈ ಹಕ್ಕಿ ಕೂಡ ಇದೇ ಜಾತಿಗೆ ಸೇರಿದ್ದು. ತನ್ನ ಪಕ್ಕದಲ್ಲೇ ಇರುವ ಹೂವಿನ ಮಕರಂದ ಅಥವಾ ಹಣ್ಣುಗಳನ್ನು ಆ ಕ್ಷಣವೇ ತಿನ್ನಲು ಹೋಗುವುದಿಲ್ಲ. ತನ್ನ ಜಾತಿಗೆ ಸೇರಿದ ಇನ್ನೊಂದು ಹಕ್ಕಿ ಇರುವಲ್ಲಿಗೆ ಹೋಗಿ ಕದ್ದು ತರುತ್ತದೆ. ಅಥವಾ ಅಲ್ಲಿರುವ ಜಾತಿ ಹಕ್ಕಿಯ ಜತೆಗೆ ಜಗಳವಾಡಿಯಾದರೂ ಕಿತ್ತು ತಿನ್ನುತ್ತದೆ.
ಹೆಸರು ‘ಕೋಮಲ ಬದನಿಕೆ’ (Plan Flowerpecker) .
ಲೋರಾಂಥೇಸಿ ಕುಟುಂಬಕ್ಕೆ ಸೇರಿದ ಹಕ್ಕಿ. ಕೋಮಲ ಬದನಿಕೆಯನ್ನು ಪೇಲವ ಬದನಿಕೆ, ಪಾಚಿ ಚುಂಡಕ್ಕಿ, ಹೂ ಚುಂಡಕ್ಕಿ ಎಂದೂ ಕರೆಯುತ್ತಾರೆ. ಎಲೆಗಳ ಮಧ್ಯದಲ್ಲೆಲ್ಲೋ ಕುಳಿತಿದ್ದರೆ ಗುರುತಿಸಲು ಸಾದ್ಯವೇ ಇಲ್ಲ. ಅಜ್ಜಪ್ಪ ಎಂದರೂ ಸದ್ದು ಮಾಡುವುದಿಲ್ಲ. ಇನ್ನು ನೋಡಲು ಹೆಚ್ಚುಕಡಿಮೆ ಎಲೆಯದೆ ಬಣ್ಣ.
ತಿಳಿ ಹಸಿರು, ಕಡು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಕಾಲುಗಳು ಮತ್ತು ಕೊಕ್ಕು ಹಳದಿ ಮಿಶ್ರಿತ ಬೂದು ಬಣ್ಣದಿಂದಿರುತ್ತೆ. ಒಟ್ಟಾರೆಯಾಗಿ ಇಡೀ ದೇಹ ಬೂದು. ಚೀಕ್….ಚಿಕ್ ಎಂದು ಸದ್ದು ಮಾಡುತ್ತಿರುತ್ತದೆ.
ಕುರುಚಲು ಕಾಡು, ತೋಟಗಳಲ್ಲಿ ಹೆಚ್ಚು ಹೆಚ್ಚು ವಾಸವಾಗಿರುವ ಈ ಬದನಿಕೆ ಹಕ್ಕಿಯ ಬಾಲ ಮೋಟಾಗಿರುತ್ತದೆ. ಹೆಚ್ಚು ಕಡಿಮೆ ಗುಬ್ಬಚ್ಚಿಯಸ್ಟೆ ಗಾತ್ರದ ಕೋಮಲ ಬದನಿಕೆ ಫೆಬ್ರವರಿಯಿಂದ ಜುಲೈ ತಿಂಗಳಾವಧಿಯಲ್ಲಿ 2-3 ಬಿಳಿಯದಾದ ಮೊತ್ತೆಗಳನ್ನಿಟ್ಟು 16 ರಿಂದ 22 ದಿನಗಳ ಕಾಲ ಕಾವು ನೀಡಿ ಮರಿಮಾಡುತ್ತದೆ.
ಸಂತಾನೋತ್ಪತ್ತಿಯ ವೇಳೆಯಲ್ಲಿ ಗೂಡು ಮಾಡಿಕೊಳ್ಳುತ್ತದೆ. ಕೋಮಲ ಬದನಿಕೆಯನ್ನು ಬಾಂಗ್ಲ, ಶ್ರೀಲಂಕಾಗಳಲ್ಲಿಯೂ ಕಾಣಲು ಸಾಧ್ಯ. ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜಾಸ್ತಿ. ಹಣ್ಣು, ಹೂವಿನ ಮಕರಂದವೇ ಈ ಹಕ್ಕಿಯ ಪ್ರಮುಖ ಆಹಾರ.


Share This

Leave a Reply

Your email address will not be published. Required fields are marked *