‘ಸಿಮೆಂಟ್’ ಬೆಳ್ಳಕ್ಕಿ ಇದು ಕಡಲ ಹಕ್ಕಿ

Share This

ಇಡೀ ದೇಹಕ್ಕೆ ಸಿಮೆಂಟ್! 

ಇದೇನು ಜೀವಂತ ಹಕ್ಕಿಯೋ ಅಥವಾ ಸಿಮೆಂಟಿನಿಂದ ರಚಿತ ನಿರ್ಜೀವ ಕಲಾಕೃತಿಯೋ ಎಂದು ನೀವು ಹುಬ್ಬು ಮೇಲೇರಿಸಿದರೆ ಆಶ್ಚರ್ಯವಿಲ್ಲ. ಅಸ್ಟರಮಟ್ಟಿಗೆ ಈ ಹಕ್ಕಿಗೆ ಸಿಮೆಂಟ್ ಬಣ್ಣ. ಪ್ರಾದೇಶಿಕವಾಗಿ ಈ ಹಕ್ಕಿಯನ್ನು ಸಿಮೆಂಟ್ ಬೆಳ್ಳಕ್ಕಿ ಎಂದು ಕರೆದಿದ್ದಾರೆ. ಕತ್ತಿನ ಕೆಳಭಾಗ, ರೆಕ್ಕೆಗಳ ಕೆಳಭಾಗ ಮತ್ತು ಹೊಟ್ಟೆಯಿಂದ ಪುಕ್ಕದ ನಡುವಿನ ಭಾಗದಲ್ಲಿ ಬೆಳ್ಳಗಾಗಿರುತ್ತದೆ.
ಈ ಹಕ್ಕಿ ಎಲ್ಲೆಂದರಲ್ಲಿ ಕಾಣಸಿಗುವುದಿಲ್ಲ. ಸಾಮಾನ್ಯವಾಗಿ ಬೆಳ್ಳಕ್ಕಿಗಳು ಗದ್ದೆ, ಜೌಗು ಪ್ರದೇಶ ಮತ್ತು ಹುಲ್ಲುಗಾವಲು ಪ್ರದೇಶಗಳಲ್ಲಿ ಇರುವುದು ಜಾಸ್ತಿ. ಆದರೆ ಈ ‘ಕಡಲ ಬೆಳ್ಳಕ್ಕಿ’ (Western Reef Heron ) ಹಾಗಲ್ಲ. ಹೆಸರಿಗೆ ತಕ್ಕಂತೆ ಇದರ ವಾಸವೆನಿದ್ದರೂ ಸಮುದ್ರಕ್ಕೆ ಸನಿಹದಲ್ಲೆ.
ವಿಶೇಷವೆಂದರೆ ಈ ಕಡಲ ಬೆಳ್ಳಕ್ಕಿಗೆ ಸಮುದ್ರದ ಅಲೆಗಳ ಭಯವೇ ಇಲ್ಲ. ಅದೆಸ್ಟೇ ದೊಡ್ಡ ಅಲೆ ಬಂದರೂ ನಿರ್ಭೀತಿಯಿಂದ ತೀರದಲ್ಲಿ ಬೇಟೆಯಾಡುತ್ತಿರುತ್ತವೆ. ಸಮುದ್ರದ ಸಣ್ಣ ಸಣ್ಣ ಜೀವಿಗಳೇ ಇದರ ಆಹಾರ. ಬಿಳಿ ಏಡಿ ಎಂದರಂತೂ ಈ ಹಕ್ಕಿಗೆ ಪಂಚಪ್ರಾಣ. ಮುಂಗಾರು ಆರಂಭಗೊಂಡು ಸಮುದ್ರ ತನ್ನ ಅಬ್ಬರದ ಗರ್ಜನೆ ಆರಂಭಿಸಿದಾಗಲಂತೂ ಅಲ್ಲಿಂದ ಅಲ್ಲಾಡುವುದಿಲ್ಲ. ಆಗ ಜೀವಿಗಳು ಕಾಣಿಸಿಕೊಳ್ಳುತ್ತವೆಂದು ಚೆನ್ನಾಗಿ ಅರಿತಿದೆ ಈ ಬೆಳ್ಳಕ್ಕಿ.
ಈ ಹಕ್ಕಿಯಲ್ಲಿ ಕಾಣಬಹುದಾದ ಇನ್ನೊಂದು ವಿಶೇಷವೆಂದರೆ ಸಂತಾನೋತ್ಪತ್ತಿಯ ವೇಳೆಯಲ್ಲಿ ಹೆಣ್ಣು ಹಕ್ಕಿಯ ನೆತ್ತಿಯಿಂದ ನೀಳವಾದ ಜುಟ್ಟು ಬೆಳೆಯುತ್ತಾ ಇರುತ್ತದೆ. ಸಾಮಾನ್ಯವಾಗಿ ಏಪ್ರಿಲ್-ಜುಲೈ ಅವಧಿಯಲ್ಲಿ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಭಾರತ, ಲಂಕಾ, ಬಾಂಗ್ಲಗಳಲ್ಲಿ ಈ ಹಕ್ಕಿಯ ಸಂತತಿ ಇದೆ. ಹಾರಾಟದಲ್ಲಿ ಎಷ್ಟು ನಿಪುಣ ಹಕ್ಕಿಯೋ ಅಸ್ಟೇ ಜಿಪುಣ ಕೂಡ ಹೌದು. ಚಿತ್ರ ಕೃಪೆ: ಅರಿಂದಂ ಭಟ್ಟಾಚಾರ್ಯ


Share This

Leave a Reply

Your email address will not be published. Required fields are marked *