ಸಂಘಟನೆ ದೃಷ್ಟಿಯಿಂದ ಗಮನಾರ್ಹ ಕಲಾಪ್ರದರ್ಶನ

Share This

ಬೆಳಗಾವಿಗೆ ಆಕಸ್ಮಿಕವಾಗಿ ಒಂದು ಭೇಟಿ ನೀಡುವ ಸಂದರ್ಭ ಒದಗಿಬಂತು. ಹಾಗಂತ ಅಷ್ಟಕ್ಕೇ ಸಂತೋಷ ಪಡಬೇಕಾದ್ದು ಏನಿಲ್ಲವಾದರೂ, ‘ಪ್ರಯಾಸ್’ ‘Prayaas’ ಶೀರ್ಷಿಕೆಯ ಕಲಾಪ್ರದರ್ಶನ ವೀಕ್ಷಿಸಿ ಒಂದಿಷ್ಟು ಮಂದಿ ಕಲಾವಿದರನ್ನು ಭೇಟಿಮಾಡಿದ್ದು, ಅವರೊಂದಿಗೆ ಚರ್ಚಿಸಿದ್ದು ಬಹಳ ಖುಷಿನೀಡಿತು.

“One of the secrets of a happy life is continuous small treats.”
ಆಂಗ್ಲ ಕಾದಂಬರಿಗಾರ್ತಿ, ಫಿಲೋಸಫರ್ ಐರಿಸ್ ಮುರ್ಡೋಕ್ (Iris Murdoch) ಅವರ ಈ statement ಎರಡು ದಿನಗಳ ಪ್ರವಾಸದ ಉದ್ದಕ್ಕೂ ಮೆಲುಕು ಹಾಕುತ್ತಿರುವಂತೆ ಮಾಡಿತು.
34 ಕಲಾವಿದರ/ಕಲಾವಿದೆಯರ ಕಲಾಪ್ರದರ್ಶನ ‘ಪ್ರಯಾಸ್’ ಬೆಳಗಾವಿಯ ಕಲಾಮಹರ್ಷಿ ಕೆ.ಬಿ.ಕುಲಕರ್ಣಿ ಕಲಾಗ್ಯಾಲರಿಯಲ್ಲಿ ನಡೆಯುತ್ತಿದೆ. ಗುಲ್ಮೋಹರ್ ಬಾಗ್ Artist Forum (Gulmohar BAG) ಈ ಕಲಾಪ್ರದರ್ಶನ ಆಯೋಜಿಸಿದೆ. ಭೌಗೋಳಿಕವಾಗಿ ಬಹಳ ಮಹತ್ವ ಪಡೆದುಕೊಂಡಿರುವ ಬೆಳಗಾವಿಯಲ್ಲಿ ಕಲಾಸಂಚಲನ ಮೂಡಿಸುವಲ್ಲಿ gulmohar BAG ಒಂದು ವಿಶೇಷ ಪ್ರಯತ್ನಕ್ಕೆ ಇಳಿದಿದೆ. ಈಗಾಗಲೇ ಅನೇಕ ಚಟುವಟಿಕೆಗಳ ಮೂಲಕ ಪ್ರಶಂಸೆ ಸಂಪಾದಿಸಿದೆ.

ಸಂಘಟನೆ ದೃಷ್ಟಿಯಿಂದ ಈ ಕಲಾಪ್ರದರ್ಶನ ಗಮನಾರ್ಹ. ಅನೇಕ ದಿಗ್ಗಜ ಕಲಾವಿದರನ್ನು ನೀಡಿದ ಬೆಳಗಾವಿ ನೆಲದಲ್ಲಿ ಇನ್ನಷ್ಟು ಕಲಾಸಾಧಕರನ್ನು ನೋಡಬೇಕಿದೆ. ನೆರೆಯ ಮಹಾರಾಷ್ಟ್ರ ಜೊತೆಗಿನ ಅನುಬಂಧ ಬೆಳೆಸಿ, ಉಳಿಸಿಕೊಂಡು ಮುಂದೆಸಾಗುವ ಪ್ರಯತ್ನಗಳು ಆಗಬೇಕಿದೆ. ಇದನ್ನು gulmohar BAG ನಿರ್ವಹಿಸುವ ಭರವಸೆ ಮೂಡಿಸಿದೆ. ದೂರದೃಷ್ಟಿ ಇಟ್ಟುಕೊಂಡು ಮುಂದುವರಿಯಬೇಕಿದೆ.

ಭಾನುವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುಣೆಯ ಹಿರಿಯ ಕಲಾವಿದರಾದ Sharad Tarde, ಬೆಳಗಾವಿ ಮೂಲದವರೇ ಆದ Jayant. B. Hubli, ನೆರೆಯೂರಿನ ಕಲಾವಿದರಾದ Parshwanath Nandre ಪಾಲ್ಗೊಂಡು ಕಲಾಪ್ರದರ್ಶನಕ್ಕೆ ಚಾಲನೆ ನೀಡಿದರು.

Cultural Exchange ಮತ್ತು ಸಾಂಸ್ಕೃತಿಕವಾಗಿ ಪರಸ್ಪರ ಒಳಗೊಳ್ಳುವ ಹಾಗೂ ಬಾಂಧವ್ಯ ಉಳಿಸಿಕೊಂಡು ಹೋಗಬೇಕಾದ ವಾತಾವರಣ ನಿರ್ಮಾಣ ಆಗಬೇಕಿದೆ. ಯಾರೋಬಂದು ಇದನ್ನು ಮಾಡಲು ಸಾಧ್ಯವಿಲ್ಲ. ಬೆಳಗಾವಿ ನೆಲದಲ್ಲಿಯೇ ಇರುವ ಮುಂದಾಳುಗಳು ಇದಕ್ಕೆ ವೇದಿಕೆ ಹಾಕಿಕೊಡಬೇಕಿದೆ. Gulmohar BAG ಈ ಕೆಲಸ ಮಾಡುತ್ತಿರುವುದು ವೃಯಕ್ತಿಕವಾಗಿ ನನಗೆ ಬಹಳ ಸಂತೋಷವಾಗಿದೆ. ಈ ಗ್ರೂಪಿನ ಎಲ್ಲಾ ಸದಸ್ಯರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು/ my Hearty Congratulations 💐💐.


Share This

Leave a Reply

Your email address will not be published. Required fields are marked *