• ಕಲಾಕೃತಿ ಗ್ಯಾಲರಿಯಲ್ಲಿ ಸಾಧ್ಯತೆ ತೆರೆದಿಟ್ಟ ಪ್ರದರ್ಶನ
ಜಲವರ್ಣ ಬಳಕೆಯ ತಂತ್ರಗಳು ನೂರೆಂಟು. ಪ್ರತಿಯೊಬ್ಬ ಕಲಾವಿದ ಜಲವರ್ಣವನ್ನು ವಿಭಿನ್ನವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ, ಮಾಡುತ್ತಿರುತ್ತಾನೆ. ಅಭ್ಯಾಸದ ಬಲ ಹೇಗಿದೆ ಅನ್ನೋದನ್ನೆ ಮುಖ್ಯವಾಗಿಸಿಕೊಳ್ಳುತ್ತಾನೆ.
ಇದಕ್ಕೊಂದು ಉತ್ತಮ ಉದಾಹರಣೆ ಎನ್ನುವಂತಿತ್ತು ಹೈದರಾಬಾದಿನ ಕಲಾಕೃತಿ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದ್ದ ‘TRANSLUCENT WORLDS / Group Exhibition in Watercolour’ ಕಲಾಪ್ರದರ್ಶನ.
ಜಲವರ್ಣವನ್ನು ಅನೇಕ ಆಯಾಮಗಳಲ್ಲಿ ದುಡಿಸಿಕೊಂಡಿರುವುದೇ ಇಡೀ ಪ್ರದರ್ಶನದ ವಿಶೇಷವಾಗಿತ್ತು. ಅವರವರ ಸ್ಕೆಚಿಂಗ್ ಅನುಭವಕ್ಕೆ ತಕ್ಕಂತೆ ಜಲವರ್ಣವನ್ನು ದುಡಿಸಿಕೊಂಡಿದ್ದು ಕಂಡುಬಂತು. ಕಲಾಪ್ರದರ್ಶನವೂ ಆಪ್ತವೆಸಿತು.