ಪರಿಧಿ ಮೌನ ಮುರಿಯುವ ಚಿಂತನೆಗಳು 

Share This

• ಕ್ಲಿಷ್ಟತೆ ಮೀರಿ ನಿಲ್ಲುವ ಸರಳತೆಯ ವಿಶೇಷತೆ
• ವಿಶಾಲ್ ಕವಟೇಕರ್ ಅವರ ಕಲಾಕೃತಿಗಳ ಪ್ರದರ್ಶನ
ವಿಶಾಲ್ ಕವಟೇಕರ್ ಅವರ ಕಲಾಕೃತಿಗಳ at SHOPS ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ನಡೆಯಿತು.
ಒಂದೊಳ್ಳೆಯ ಕಲಾಪ್ರದರ್ಶನ ನಿಡುವ ಅನುಭೂತಿ ‘at SHOPS’ ನೀಡಿತು. ಅವರ ಕಲಾಕೃತಿಗಳ ರಚನೆಯ ಹಿಂದಿನ thought process ಬಗ್ಗೆ ತಿಳಿದುಕೊಳ್ಳಬೇಕೆನ್ನುವ ಕುತೂಹಲ ಹೆಚ್ಚಿಸಿವೆ ಪ್ರದರ್ಶಿತ ಕೆಲವು ಕಲಾಕೃತಿಗಳು. ಕಲಾವಿದ ತನ್ನೊಳಗೆ ಹುಟ್ಟಿಕೊಳ್ಳುವ ಆಲೋಚನೆಗಳನ್ನು tangible or intangible ನೆಲೆಗೆ ತಂದು, ಸೂಕ್ತ ಪ್ರಸ್ತುತಿಯಾಗಿಸುವ
ಪ್ರಕ್ರಿಯೆ ಮುಖ್ಯವೆನಿಸಿಕೊಳ್ಳುತ್ತವೆ. ವಿಶಾಲ್ ಅವರ ಅನೇಕ ಕಲಾಕೃತಿಗಳಲ್ಲಿ ಈ ಪ್ರಯತ್ನ ಕಾಣಿಸಿತು. ತಮ್ಮ ಇತಿ-ಮಿತಿಯಲ್ಲೇ ಪ್ರದರ್ಶಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಕೆಲವು ಕಲಾಕೃತಿಗಳನ್ನು ಹೊರತು ಪಡಿಸಿ ನೋಡುವುದಾದಲ್ಲಿ ಇದೊಂದು ಅತ್ಯಂತ ಒಳ್ಳೆಯ ಪ್ರದರ್ಶನವಾಗಿ ದಾಖಲಿಸಬಹುದಾಗಿದೆ. ವೈಯಕ್ತಿಕವಾಗಿ ಅವರ ಮುಂದಿನ ಪ್ರದರ್ಶನದ ಬಗ್ಗೆ ನನಗೆ ಕುತೂಹಲ ಹೆಚ್ಚಿದೆ.
ಮೌನವಾಗಿಯೇ ಮೌನ ಮುರಿದು ನಿಲ್ಲಿಸುವ ಪ್ರಯತ್ನ ಕೆಲವು ಕಲಾಕೃತಿಗಳಲ್ಲಿ ಆಗಿದೆ. ಇವು ಅವರ ಧ್ಯಾನಸ್ಥ ಭಾವಾಭಿವ್ಯಕ್ತಿಗೆ ಸಾಕ್ಷಿಯಾಗಿದೆ.
ಸ್ನೇಹಿತರೆ, ಕಲಾಪ್ರದರ್ಶನ ಸೆಪ್ಟೆಂಬರ್ 7ರಂದೇ ಸಂಪನ್ನಗೊಂಡಿದೆ. ಬೇರೆ ಬೇರೆ ಕೆಲಸದ ಒತ್ತಡದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಕೊಂಚ ತಡವಾಗಿದೆ, ಮನ್ನಿಸಿ.
Congratulations Vishal ಅವರೆ 💐

 

 

 

 

 

 

 

 


Share This

Leave a Reply

Your email address will not be published. Required fields are marked *