‘ದೃಶ್ಯ ಸಂಗಮ’ದಲ್ಲಿ ಭಾವ ‘ವಿಹಂಗಮ

Share This

 • ಚಿತ್ರಕಲಾ ಪರಿಷತ್ತಿನಲ್ಲಿ ಸಮೂಹ ಕಲಾಪ್ರದರ್ಶನ
ಧ್ಯಾನಿಸಲು ಪ್ರೇರೇಪಿಸುವ ಅಮೂರ್ತತೆ, ಗಾಢ ವರ್ಣಗಳ ಮಾಯೆಯಲ್ಲಿ ಭಾವಪ್ರವಾಹ, ಕುತೂಹಲ ಕೆರಳಿಸುವ ಕಲ್ಪಾನಾತೀತ ಪರಿಕಲ್ಪನೆ, ವಿರಳವಲ್ಲದ ಸರಳ ಅಭಿವ್ಯಕ್ತಿಗಳಿಂದ ಕೂಡಿದ ಕಲಾಕೃತಿಗಳು!
‘Visual Confluence’ ಶೀರ್ಷಿಕೆಯಡಿ ದೇಶದ ಬೇರೆ ಬೇರೆ ಭಾಗಗಳ ಕಲಾವಿದರ ಸಮೂಹ ಕಲಾಪ್ರದರ್ಶನದ ಒಂದು ಸಂಕ್ಷಿಪ್ತ ನೋಟವಿದು. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 3 ಮತ್ತು 4 ರಲ್ಲಿ ನಡೆಯುತ್ತಿದ್ದು, 19 ಮಂದಿ ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಸಮಕಾಲೀನ ಸಂದರ್ಭದ ಆಲೋಚನೆಗಳ ಜೊತೆ ಓಡುವ ತುಡಿತ ಹಾಗೂ ತಮ್ಮ ಬಹುದಿನಗಳ ಅಭ್ಯಾಸದಿಂದಾಚೆ ಬರಬೇಕೆನ್ನುವ ಹಂಬಲ ಇವೆರಡರ ನಡುವಿನ ಗಮನಾರ್ಹ ಪ್ರಯತ್ನಗಳು ಪ್ರದರ್ಶಿತ ಕಲಾಕೃತಿಗಳಲ್ಲಿ ಕಾಣಿಸಿದವು. ವಿಭಿನ್ನ ನೆಲೆಯಲ್ಲಿ ನಿಲ್ಲುವ ಭಿನ್ನ ಶೈಲಿಯ ಕಲಾಕೃತಿಗಳ ಪ್ರದರ್ಶನ ಎನ್ನಬಹುದು.

 

 

 


Share This

Leave a Reply

Your email address will not be published. Required fields are marked *