ಹ್ಯುಂಡೈ ವೆನ್ಯೂ ಕಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಡಿಮಾಂಡ್. 2019ನೇ ವರ್ಷ್ಯಾಂತಕ್ಕೆ ಬರೋಬ್ಬರಿ 1 ಲಕ್ಷ ಬುಕಿಂಗ್ ಗುರಿ ಮುಟ್ಟಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈಗಾಗಲೇ ತನ್ನ ನೂತನ ವೆನ್ಯೂ ಕಾರನ್ನು ದಕ್ಷಿಣ ಆಫ್ರಿಕಾದಲ್ಲೂ ಬಿಡುಗಡೆ ಮಾಡಿದೆ. 1,400 ಕಾರುಗಳನ್ನು ಕಂಪನಿ ರಫ್ತು ಮಾಡಿವೆ. ಲೆಫ್ಟ್ ಹ್ಯಾಂಡ್ ಚಾಲಿತ ಕಾರುಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗಲ್ಫ್, ಆಫ್ರಿಕನ್ ಮತ್ತು ಅಮೆರಿಕ ದೇಶಗಳಿಗೂ ಈ ಮಾದರಿಗಳನ್ನು ರಫ್ತು ಮಾಡಲಾಗುವುದು ಎಂದು ಎಂದು ಕಂಪನಿ ಹೇಳಿಕೊಳ್ಳುತ್ತಿದೆ.
6.50 ಲಕ್ಷ ರೂ. ಬೆಲೆಯೊಂದಿಗೆ ವೆನ್ಯೂ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 11.11 ಲಕ್ಷ ರೂ.ವರೆಗಿನ ವೀರಿಯಂಟ್ ಗಳಿವೆ. ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಎರಡು ಆಯ್ಕೆಗಳಲ್ಲೂ ಹ್ಯುಂಡೈ ವೆನ್ಯೂ ಕಾರು ಲಭ್ಯವಿದೆ. ಬಿಎಸ್4 ಇಂಜಿನ್ಗಳನ್ನು ಪರಿಚಯಿಸಲಾಗಿದ್ದು, ಹೊಸ ಎಮಿಸನ್ ನಿಯಮಗಳಿಗೆ ಅನುಗುಣವಾಗಿ ನವೀಕರಿಸಬೇಕಾಗಿದೆ. ಸದ್ಯಕ್ಕೆ ಕಂಪನಿಗೆ ಇದೊಂದು ಸವಾಲಾಗಿದ್ದು, ಅನಿವಾರ್ಯವಾಗಿ ಬಲಾವಣೆ ಮಾಡಿಕೊಳ್ಳಬೇಕಿದೆ.