ವಂಡರ್! ನ್ಯೂ ಎಂಡವರ್

Share This

10 ಸ್ಟೀಡ್ ಆಟೋ ಮತ್ತು ಸೆಲೆಕ್ಟ್ ತಂತ್ರಜ್ಞಾನದ ವಿಶ್ವದ ಮೊದಲ ಕಾರೆಂಬ ಹೆಗ್ಗಳಿಕೆ. ಅತ್ಯಂತ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಎಸ್‍ಯುವಿ ಎಸ್‍ಯುವಿ ಸೆಗ್ಮೆಂಟ್ .

ನ್ಯೂ ಎಂಡವರ್

ಕಾರುಗಳ ಬೇಡಿಕೆ ಕುಸಿದ ದಿನಗಳಿಲ್ಲ. ಅದರಲ್ಲೂ ಕಳೆದ ನಾಲ್ಕಾರು ವರ್ಷಗಳಿಂದೀಚೆ ಬೇಡಿಕೆ ದ್ವಿಗುಣಗೊಂಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆ ನೋಡಿದರೆ, ಎಸ್‍ಯುವಿ ಕಾರುಗಳು ತಂತ್ರಜ್ಞಾನ ಅಳವಡಿಕೆಯೊಂದಿಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದುರೀತಿಯ ಕ್ರಾಂತಿಯನ್ನೇ ನಡೆಸಿವೆ.
ಆದರೆ, ಫ್ಯಾಮಿಲಿ ಮಂದಿಗೂ ಹಾಗೂ ವಾಹನ ಕ್ರೇಜಿಗಳನ್ನೂ ತನ್ನತ್ತ ಸೆಳೆದು ಜನಪ್ರಿಯತೆ ಉಳಿಸಿಕೊಂಡಿರುವ ಕಾರುಗಳು ಬೆರಳೆಣಿಕೆಯಷ್ಟು ಮಾತ್ರ. ಈ ಎರಡೂ ಕ್ಯಾಟಗರಿಯ ಮಂದಿಯನ್ನು ಆಕರ್ಷಿಸುವಂತೆ ನೋಡಿಕೊಳ್ಳುವಲ್ಲಿ ಅನೇಕ ಎಸ್‍ಯುವಿಗಳು ವಿಫಲವಾಗಿವೆ. ಆ ಕಾರಣಕ್ಕಾಗಿಯೇ ಬೆರಳೆಣಿಯಷ್ಟು ಎಸ್‍ಯುವಿ ಕಾರುಗಳು ಮಾತ್ರ ಇಂದಿಗೂ ತನ್ನದೇ ಆದ ಒಂದು ವರ್ಗವನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿವೆ. ಇಂತಹ ಕಾರುಗಳ ಸಾಲಿಗೆ ಸೇರಿದ ಎಸ್‍ಯುವಿ ಫೋರ್ಡ್ ಎಂಡವರ್.
ಎಂಡವರ್ ಎಂದಾಕ್ಷಣ ಒಮ್ಮೆ ರೋಮಾಂಚನಗೊಳ್ಳುವ ಅಭಿಮಾನಿ ವರ್ಗಕ್ಕೆ ಇದೀಗ ಫೋರ್ಡ್ ಕಂಪನಿ ಹೊಸದೊಂದು ಸುದ್ದಿ ನೀಡುತ್ತಿದೆ. ಅನೇಕ ಬದಲಾವಣೆಯೊಂದಿಗೆ ಹೊಸ ಎಂಡವರ್ ವೇರಿಯಂಟ್ ಪರಿಚಯಿಸಲು ಮುಂದಾಗಿದೆ. ಎಸ್‍ಯುವಿ ಕಾರುಗಳ ಮಾರುಕಟ್ಟೆಯಲ್ಲಿ ಇನ್ನೊಮ್ಮೆ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಲ್ಲಿ ಕಂಪನಿ ಇದೆ. ಈಗಾಗಲೇ ಭಾರತವೂ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ತನ್ನ ಹೊಚ್ಚಹೊಸ ಎಂಡವರ್ ಕಾರುಗಳನ್ನು ಸಾಮಥ್ರ್ಯ ಹಾಗೂ ಹೊಸ ಫೀಚರ್‍ಗಳನ್ನು ಪರಿಚಯಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಕಳೆದ ವಾರ ಬೆಂಗಳೂರಿನಲ್ಲಿಯೂ “ಗ್ರೇಟ್ ಫೋರ್ಡ್ ಎಂಡಿವರ್ ಡ್ರೈವ್’ ಆಫ್‍ರೋಡ್ ಚಾಲನೆಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಸಾವಿರಾರು ಫೋರ್ಡ್ ಗ್ರಾಹಕರು, ವಾಹನ ಕ್ರೇಜಿಗಳು ಚಾಲನೆ ಮಾಡಿದರು.
ಏಪ್ರಿಲ್ 30ರ ಒಳಗೆ ಬುಕ್ ಮಾಡುವ ಗ್ರಾಹಕರು ವಿಶೇಷ ರಿಯಾಯತಿ ದರದಲ್ಲಿ ಖರೀದಿಸುವ ಆಫರ್‍ನ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ಹೊಚ್ಚ ಹೊಸ ಎಂಡವರ್‍ನ ಬೆಲೆ ಮೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ವೇಳೆ ಪ್ರಕಟಿಸುವ ಲೆಕ್ಕಾಚಾರದಲ್ಲಿ ಕಂಪನಿ ಇದೆ.

ಎಂಜಿನ್ ವಿಶೇಷತೆ
ನ್ಯೂ ಎಂಡವರ್ ಕಾರಿನ ಎಂಜಿನ್ ಈ ಹಿಂದಿಗಿಂತಲೂ ಉತ್ತಮಗೊಳಿಸುವಲ್ಲಿ ಫೋರ್ಡ್ ಯಶಸ್ಸಿನ ಹೆಜ್ಜೆ ಇಟ್ಟಿದೆ. ಸರಿಸಾಟಿ ಇಲ್ಲದ ರೀತಿಯಲ್ಲಿ 2.0 ಲೀಟರ್ ಇಕೋಬ್ಲ್ಯೂ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸಿ ಎಂಡವರ್‍ನಲ್ಲಿ ಅಳವಡಿಸಿದೆ. ಇದರಿಂದಾಗಿ ಇಂಧನ ಕ್ಷಮತೆಯ ಜೊತೆಗೆ ಅತ್ಯುತ್ತಮ ಪರ್ಫಾರ್ಮೆನ್ಸ್ ಮತ್ತು ರಿಫೈನ್‍ಮೆಂಟ್ ನಿರೀಕ್ಷಿಸಬಹುದಾಗಿದೆ. 170 ಪಿಎಸ್ ಗರಿಷ್ಠ ಸಾಮಥ್ರ್ಯ ಮತ್ತು 420 ಎನ್‍ಎಂ ಗರಿಷ್ಠ ಟಾರ್ಕ್ ಸಾಮಥ್ರ್ಯ ಇದರದ್ದಾಗಿದೆ. ಭಾರತ್ ಸ್ಟೇಜ್ 6ಗೆ ಅನುಗುಣವಾಗಿ ಇಂಧನ ಕ್ಷಮತೆಯೂ ವೃದ್ದಿಸುವಂತೆ ವಿನ್ಯಾಸಗೊಳಿಸಲಾಗಿದೆ. 4ಘಿ2 ವೇರಿಯಂಟ್‍ನಲ್ಲಿ ಪ್ರತಿ ಲೀಟರ್‍ಗೆ 13.90 ಕಿಲೋಮೀಟರ್ ಬರುವಂತೆಯೂ, 4ಘಿ4 ನಲ್ಲಿ 12.4 ಕಿಲೋಮೀಟರ್ ಮೈಲೇಜ್ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಮೊದಲಿಗಿಂತಲೂ ಶೇ.14ರಷ್ಟು ಇಂಧನ ಉಳಿತಾಯ ಸಾಧ್ಯ ಎಂದು ಹೇಳಲಾಗಿದೆ.

ಹೊಸ ಅಧ್ಯಾಯ ಬರೆದ 10 ಸ್ಟೀಡ್ ಗೇರ್!
ಹೊಸ ಎಂಡವರ್‍ನ ಹೊಸ ಫೀಚರ್ ಇದು. ವಿಶ್ವದ ಯಾವುದೇ ಎಸ್‍ಯುವಿಯಲ್ಲೂ ಇಂಥದ್ದೊಂದು ಫೀಚರ್ ಬಳಕೆ ಆಗಿದ್ದಿಲ್ಲ. 10 ಸ್ಫೀಡ್ ಆಟೋಮ್ಯಾಟಿಕ್ ಟ್ರಾನ್ಸ್‍ಮಿಷನ್ ಜೊತೆಗೆ ಸೆಲೆಕ್ಟ್‍ಶಿಫ್ಟ್ ಆಪ್ಶನ್ ಇರುವುದು ಇದೇ ಮೊದಲು. ಈ ಮೂಲಕ ಆಟೋಮೊಬೈಲ್ ಕ್ಷೇತ್ರದಲ್ಲಿ ಫೋರ್ಡ್ ಹೊಸದೊಂದು ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಫೀಚರ್ ಲಾಂಗ್ ಡ್ರೈವ್‍ನಲ್ಲಿ ಚಾಲಕ ಸ್ನೇಹಿ ಹಾಗೂ ಐಷಾರಾಮಿ ಪ್ರಯಾಣ ಬಯಸುವವರಿಗೂ ಹೊಸದೊಂದು ಅನುಭವ ನೀಡುವುದರಲ್ಲಿ ಯಾವುದೇ ಅನುಮಾಣ ಇಲ್ಲ. ಇದರಿಂದ ಆಕ್ಸಲರೇಷನ್ ಬಳಕೆಯಲ್ಲಿ ನಯವಾದ ಅನುಭವ ಸಾಧ್ಯ. ಗೇರ್ ಬದಲಾವಣೆ ಕೂಡ ಯಾವುದೇ ರೀತಿಯಲ್ಲಿ ಅನುಭವಕ್ಕೆ ಬಾರದ ರೀತಿಯಲ್ಲಿ ವಿನ್ಯಾಸಗೊಳಿಸಿರುವುದು ಕಾರಿನಲ್ಲಿರುವ ಫೀಚರ್‍ಗಳ ಪೈಕಿ ಒಂದು ವಿಶೇಷ ಅನಿಸಿಬಿಡುತ್ತದೆ. ಹಾಗಾದರೆ 10 ಸ್ಪೀಡ್ ಆಟೋ ಟ್ರಾನ್ಸ್‍ಮಿಷನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ಸಹಜ. ಅಷ್ಟಕ್ಕೂ ಹೇಳಿಕೊಳ್ಳುವಂತಹ ಕಷ್ಟದಾಯಕ ತಂತ್ರಜ್ಞಾನವೇನಲ್ಲ. ಚಾಲಕ ಸ್ನೇಹಿಯಾಗಿಯೇ ವಿನ್ಯಾಸಗೊಂಡಿದೆ. ಚಾಲಕ ಡ್ರೈವ್ ಆರಂಭಿಸುವುದಕ್ಕೂ ಮೊದಲು ಗೇರ್ ಸ್ಪೀಡ್ ಆಯ್ಕೆ ಮಾಡಿಟ್ಟುಕೊಳ್ಳಬಹುದು. 3 ಸ್ಪೀಡ್‍ನಲ್ಲೂ, 4 ಸ್ಪೀಡ್‍ನಲ್ಲೂ ಅಥವಾ 10 ಸ್ಪೀಡ್‍ನಲ್ಲೂ ಓಡಿಸುವ ಆಯ್ಕೆ ಚಾಲಕನಿಗೆ.

ಸೆಲೆಕ್ಸ್ ಶಿಫ್ಟ್ ಸಿಸ್ಟಮ್!:
ಎಂಡವರ್ ಇನ್ನೂ ಒಂದಿಷ್ಟು ಹೊಸ ಫೀಚರ್‍ಗಳ ಮೂಲಕ ಕ್ರೇಜಿ ಚಾಲಕರ ಸ್ನೇಹಿಯಾಗಿದೆ. “ಸೆಲೆಕ್ಟ್ ಶಿಪ್ಟ್” ಮಗದೊಂದು ವಿಶೇಷ ಫೀಚರ್. ಪ್ರೊಗ್ರೆಸ್ಸೀವ್ ರೇಂಜ್ ಆಯ್ಕೆ ಮಾಡಿಕೊಳ್ಳುವಂತಹ ಅವಕಾಶ ಮಾಡಿಕೊಡಲಾಗಿದೆ. ಗೇರ್‍ಗಳನ್ನು ನಮ್ಮ ಆಯ್ಕೆಗೆ ತಕ್ಕಂತೆ ಅದರದೇ ಪ್ರಮಾಣದಲ್ಲಿ ಹಿಡಿದಿಡುವ ಅರ್ಥಾತ್ ಲಾಕ್ ಮಾಡಿಕೊಳ್ಳುವ ಅವಕಾಶವೂ ಇದೆ. ಈ ತಂತ್ರಜ್ಞಾನದಿಂದ ಆಫ್ ರೋಡ್ ಡ್ರೈವ್ ವೇಳೆ ಇಳಿಜಾರಿನಲ್ಲಿ ಅಥವಾ ಟಯರ್‍ಗಳು ಸ್ಕಿಡ್ ಆಗುವಂತಹ ರಸ್ತೆಗಳಲ್ಲಿ ವಿಶೇಷವಾದ ಅನುಭವ ನೀಡುತ್ತದೆ. ಜತೆ ಜೊತೆಗೆ ಡ್ರೈವ್ ವೇಳೆ ಸುರಕ್ಷತೆ ಬಯಸುವ ಚಾಲಕರು ಮೆಚ್ಚಿಕೊಳ್ಳುವಂತಹ ಫೀಚರ್ ಇದಾಗಿದೆ.

ಇನ್ನಷ್ಟು ವಿಶೇಷ

  • ಸಮಕಾಲೀನ ವಿನ್ಯಾಸದ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಲಾಗಿದ್ದು, ಈ ಹಿಂದಿಗಿಂತಲೂ ಶೇ.20ರಷ್ಟು ಹೆಚ್ಚಿನ ಬೆಳಕು ನಿರೀಕ್ಷಿಸಬಹುದು.
  • ಚಾಲಕ ಸೇರಿ ಏಳು ಸೀಟರ್ ವಾಹನ ಇದಾಗಿದ್ದು, ಒಟ್ಟು ಏಳು ಏರ್ ಬ್ಯಾಗ್‍ಗಳನ್ನು ನೀಡಲಾಗಿದೆ.
  • ಟೆರೈನ್ ಮ್ಯಾನೇಜ್‍ಮೆಂಟ್ ಸಿಸ್ಟಂ ಅಳವಡಿಕೆಯ ಮೊದಲ ಸೆಗ್ಮೆಂಟ್ ವಾಹನ ಇದಾಗಿದ್ದು, ಒಟ್ಟು ನಾಲ್ಕು ಮೋಡ್‍ಗಳಿಗೆ ಅವಕಾಶವಿದೆ. ಸಾಮಾನ್ಯ ರಸ್ತೆಗಳಾಗಿದ್ದಲ್ಲಿ, ಮಂಜು, ಅರಲು ಅಥವಾ ಹುಲ್ಲುಗಳೇ ಇರುವ ರಸ್ತೆಗಳಲ್ಲಿ, ಮರಳು ತುಂಬಿದ ರಸ್ತೆಗಳಲ್ಲಿ ಹಾಗೂ ಕಲ್ಲುಗಳೇ ತುಂಬಿರುವ ರಸ್ತೆಗಳಲ್ಲಿ ಅದಕ್ಕೆ ತಕ್ಕುದಾದ ಮೋಡ್‍ನಲ್ಲಿ ಚಾಲನೆ ಮಾಡಬಹುದು. ಥ್ರಾಟಲ್ ರೆಸ್ಪಾನ್ಸ್, ಟ್ರಾಕ್ಷನ್ ಕಂಟ್ರೋಲ್, ಫೋರ್ ವೀಲ್ ವ್ಯವಸ್ಥೆ ಮತ್ತು ಟ್ರಾನ್ಸ್‍ಮಿಷನ್ ಮಾರ್ಪಡಿಸಿಕೊಳ್ಳುವ ಆಯ್ಕೆ ಚಾಲಕನಿಗಿರುತ್ತದೆ.
  • ಅತಿ ಎಚ್ಚು ಗ್ರೌಂಡ್ ಕ್ಲಿಯರೆನ್ಸ್ ಜೊತೆಗೆ 800 ಎಂಎಂ ವಾಟರ್ ವೇಡಿಂಗ್ ವ್ಯವಸ್ಥೆ ಹೊಂದಿದೆ.
  • ವೈಸ್ ಎನೇಬಲ್ಡ್ ಮತ್ತು ಇನ್ ಕಾರ್ ಕನೆಕ್ಟಿವಿಟಿಯ ಎಸ್‍ವೈಎನ್‍ಸಿ 3 ತಂತ್ರಜ್ಞಾನದ 8 ಇಂಚಿನ ಟಚ್ ಸ್ಕ್ರೀನ್, ಆಪಲ್ ಕಾರ್ ಪ್ಲೇ ಅಳವಡಿಸಲಾಗಿದೆ.
  • ಎಚ್ಚುಕಡಿಮೆ ಶೇ.50ರಷ್ಟು ಮೇಲ್ಚಾವಣಿ ತೆರೆದುಕೊಳ್ಳುವ ಸನ್ ರೂಫ್ ವ್ಯವಸ್ಥೆ ಇದೆ.
  • ಒಂದೊಮ್ಮೆ ಲಗೇಜ್ ಹೆಚ್ಚು ಇದ್ದಲ್ಲಿ ಆಗ 2010 ಲೀಟರ್‍ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದು.
  • ಪುಷ್ ಸ್ಟಾರ್ಟ್ ಬಟನ್, ಹಿಂಭಾಗ ಕೇಂದ್ರಿತ ಹ್ಯಾಂಡ್ ಫ್ರೀ ಪವರ್ ಲಿಫ್ಟ್ ಗೇಟ್, ಹಿಂಭಾಗ ಮತ್ತು ಮುಂಭಾಗದಲ್ಲಿ ಸೆನ್ಸಾರ್, ಹಿಂಭಾಗದಲ್ಲಿ ಕ್ಯಾಮರಾ, ಸೆಮಿ ಆಟೋ ಪ್ಯಾರಲಲ್ ಪಾರ್ಕ್ ಅಸಿಸ್ಟ್, ಆಟೋ ವೈಫರ್, ಆಟೋ ಕ್ಲೈಮೇಟ್ ಕಂಟ್ರೋಲ್ ಇಂದಿನ ಬಹುತೇಕ ಕಾರುಗಳಲ್ಲಿ ಇರುವಂತೆ ಇದರಲ್ಲಿಯೂ ಲಭ್ಯ.

ಫೋರ್ಡ್‍ಪಾಸ್ ಅಪ್ಲಿಕೇಷನ್:
ಹೌದು, ಇದು ಅನೇಕ ಕಾರಣಗಳಿಂದ ಚಾಲಕ ಸ್ನೇಹಿ. ತಂತ್ರಜ್ಞಾನದ ಮುಂದುವರಿದ ಭಾಗಗಳಲ್ಲಿ ಇದೂ ಒಂದಾಗಿದ್ದು, ಕಾರಿನ ಅನೇಕ ಸಮಸ್ಯೆಗಳಿಗೆ ಚಾಲಕನಿಗೆ ಅನುಕೋಲವಾಗುವಂತೆ ಫೋರ್ಡ್‍ಪಾಸ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಚಾಲಕ ಮೂಲಭೂತವಾದ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬಹುದು. 2020ರ ಎಂಡವರ್‍ನ ಎಲ್ಲಾ ವೇರಿಯಂಟ್‍ಗಳೂ ಕ್ಲೌಡ್ ಸಂಪರ್ಕಿತ ವಿನ್ಯಾಸದಿಂದ ಒಳಗೊಂಡಿದ್ದು, ಈ ತಂತ್ರಜ್ಞಾನದಿಂದಾಗಿ ಸಮಸ್ಯೆ ಎದುರಾದ ಕ್ಷಣದಲ್ಲಿಯೇ ಪರಿಹಾರ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಕನ್ನಡಪ್ರಭದಲ್ಲಿ ಪ್ರಕಟಗೊಂಡ ಲೇಖನ

Share This

Leave a Reply

Your email address will not be published. Required fields are marked *