ಬದಲಾವಣೆಯೊಂದಿಗೆ ಗ್ರಾಹಕರ ಆಕರ್ಷಿಸಲಿದೆ ಮಹೇಂದ್ರ ನ್ಯೂ ಥಾರ್

Share This

ಹೇಂದ್ರ ಥಾರ್’ ಅಂದಾಕ್ಷಣ ಆ ವಾಹನದಲ್ಲಿನ ಒಂದು ಕ್ರೇಜಿ ಡ್ರೈವ್ ನಮ್ಮ ಕಣ್ಣ ಮುಂದೆ ಬಂದು ಬಿಡುತ್ತದೆ. ಅದೇ ಥಾರ್ ವಿಶೇಷ. ಥಾರ್ ಈಗ ಹೊಸ ವಿನ್ಯಾಸದಲ್ಲಿ ಕ್ರೇಜಿಗಳನ್ನು ಕೆರಳಿಸುತ್ತಿದೆ.

ಜನಪ್ರಿಯ ಕಂಪನಿಯಾದ ಮಹೇಂದ್ರ ತನ್ನ ನೂತನ ಥಾರ್ SUV ವಾಹನವನ್ನು ಅನಾವರಣಗೊಳಿಸಿದೆ. ಆದರೆ ಎನ್ನಷ್ಟೇ ಮಾರುಕಟ್ಟೆ ಪ್ರವೇಶಿಸಬೇಕಿದೆ. ಕ್ರೇಜಿ ಗ್ರಾಹಕರ ತವಕವನ್ನು ದ್ವಿಗುಣಗೊಳಿಸಿದೆ. ಅದರಲ್ಲೂ ಆಫ್ ರೋಡ್ ಡ್ರೈವ್ ಇಷ್ಟಪಡುವ ಗ್ರಾಹಕರಿಗಂತೂ ಎಂದು ಮಾರುಕಟ್ಟೆಯಲ್ಲಿ ಲಭ್ಯ ಎಂಬ ಕೌತುಕ ಈಗಾಗಲೇ ಶುರುವಾಗಿದೆ.
ಹಾಗಿದ್ದಮೇಲೆ ಏನಿದೆ ವಿಶೇಷ.. ಇಲ್ಲಿದೆ ನೋಡಿ.

2010ರಲ್ಲಿ ಭಾರತದಲ್ಲಿ ತನ್ನ ಫಸ್ಟ್ ಜೋನ್ ಥಾರ್ ಮಾಡೆಲ್ ಬಿಡುಗಡೆ ಮಾಡಿತ್ತು. ಬಳಿಕ 2015ರಲ್ಲಿ ಫೇಸ್ ಲಿಫ್ಟ್ ವಿನ್ಯಾಸದೊಂದಿಗೆ ಹೊಸ ಮಾಡೆಲ್ ಬಿಡುಗಡೆ ಮಾಡಿತು. ಆದರೆ ನಿರೀಕ್ಷೆಯ ಬೇಡಿಕೆ ಕಾಣಿಸಲಿಲ್ಲ. ಹೀಗಾಗಿ ಮತ್ತೊಮ್ಮೆ ವಿನ್ಯಾಸಗೊಳಿಸಿದೆ. ಎರಡನೇ ತಲೆಮಾರಿನ ಈ ಮಾಡೆಲ್ ಸಂಪೂರ್ಣ ಹೊಸದೆನಿಸುವಂತಿದೆ. ವಿಶೇಷವೇನೆಂದರೆ ಬಾಹ್ಯ ಮತ್ತು ಒಳ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಹೀಗಾಗಿ ಥಾರ್ ಹೊಸದೊಂದು ಅನುಭವವನ್ನೇ ನೀಡುವಂತಿದೆ. ಅಷ್ಟೇ ಅಲ್ಲ ಆಕರ್ಷಣೆಗೂ ಕಾರಣವಾಗಿದೆ. ಗ್ರಿಲ್ ಮತ್ತು ಲ್ಯಾಂಪ್ ವಿನ್ಯಾಸ ಒಂದು ಹೊಸ ಲುಕ್ ಕೊಟ್ಟಿದೆ.

ಡ್ಯಾಶ್ ಬೊರ್ಡ್ ಮೇಲಿನ ಇನ್ಫೋಟೆನ್ಮೆಂಟ್ ಸಿಸ್ಟಮ್ ಟಚ್ ಸ್ಕ್ರೀನ್ ನಿಂದ ಕೂಡಿದೆ. ಜೊತೆಗೆ ಒಂದಿಷ್ಟು ಚಾಲಕ ಸ್ನೇಹಿಯಾದ ಆಪ್ಷನ್ ನೀಡಲಾಗಿದೆ. ಕ್ರೂಜ್ ಕಂಟ್ರೋಲ್ ವ್ಯವಸ್ಥೆ ಹೊಂದಿರುವ ನ್ಯೂ ಥಾರ್ ಸ್ಟೀರಿಂಗ್ ಹೆಚ್ಚುಕಡಿಮೆ ಟಿಯುವಿ300 ಮಾದರಿಯಲ್ಲೇ ಇದೆ.

ಇನ್ನು ಹೊಸ ಥಾರ್ ಎಂಜಿನ್ ಈ ಹಿಂದಿನ ಥಾರ್ ಎಂಜಿನ್ ಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಥಾರ್ ನಲ್ಲಿ 140 HP, 2.2 ಲೀಟರ್ ನ mHawk ಡೀಸಲ್ ಹಾಗೂ 188HP, 2.0 ಲೀಟರ್ ನ ಟರ್ಬೋ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. 6 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್ಮಿಷನ್ ಹೊಂದಿದೆ. ಮೂರ್ನಾಲ್ಕು ವರ್ಷಗಳ ಪರಿಶ್ರಮದಿಂದ ಅಂತಿಮವಾಗಿ ಥಾರ್ ಒಂದು ಹೊಸ ವಿನ್ಯಾಸ ಹಾಗೂ ಸಾಮರ್ಥ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

https://www.youtube.com/watch?v=S9h4ztsDXb0

Share This

Leave a Reply

Your email address will not be published. Required fields are marked *