• ಪ್ರತಿಷ್ಠಿತ ವಿನ್ಯಾಸಕಾರರ ಮುಖಾಮುಖಿ
• ದೃಶ್ಯ ಕಲೆ, ಕಲಾಕೃತಿಗಳ ಅನಾವರಣ
ದೃಶ್ಯಕಲಾ (Visual Art) ಕ್ಷೇತ್ರದಲ್ಲಿ ಅನುದಿನವೂ ಹೊಸ ಹೊಸ ಆಯಾಮಗಳಲ್ಲಿ ನೋಡುವ, ತೆರೆದಿಡುವ ಪ್ರಯತ್ನಗಳು ನಿರಂತರವಾಗಿ ನಡೆದುಬಂದಿದೆ. ಹಾಗೇ ವಿನ್ಯಾಸ(Design) ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ನಿರಂತರ ಬದಲಾವಣೆ ಮತ್ತು ತಂತ್ರಜ್ಞಾನದ ಜೊತೆ ಹೆಜ್ಜೆ ಇಡುವುದರಲ್ಲಿ ವಿನ್ಯಾಸ ಕ್ಷೇತ್ರ ತುಸು ಮುಂದೆ ಅನಿಸಿದರೂ ಅಚ್ಚರಿ ಇಲ್ಲ. ಸಮಕಾಲೀನ ಸಂದರ್ಭದಲ್ಲಿ ಈ ಎರಡು ಕ್ಷೇತ್ರಗಳ ಬೆಳವಣಿಗೆ ಅನ್ಯೋನ್ಯವಾಗಿಯೇ ಸಾಗುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಬದಲಾವಣೆಗಳಿಗೆ ಸಹಸ್ಪಂದನೆಯ ಪ್ರಮುಖ ಮಾಧ್ಯಮವಾಗಿ ಪ್ರಾಮುಖ್ಯತೆ ಪಡೆದುಕೊಂಡಿವೆ.
ಸಮಕಾಲೀನ ದೃಶ್ಯಕಲೆ ಮತ್ತು ವಿನ್ಯಾಸ (Contemporary Visual Art and Design) ಕ್ಷೇತ್ರದ ಸಾಧ್ಯತೆಗಳನ್ನು ಗಮನಿಸಿದಾಗ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಹೊಸ ದೃಶ್ಯ ಭಾಷೆಯಾಗಿ ಪ್ರಾಬಲ್ಯ ಪಡೆಯುವುದರಲ್ಲಿ ಯಾವ ಅನುಮಾನವೂ ಕಾಣಿಸುವುದಿಲ್ಲ. ಈಗಾಗಲೇ, ಭಾರತವೂ ಸೇರಿದಂತೆ ಜಗತ್ತಿನ ಮುಂದುವರಿದ ದೇಶಗಳಲ್ಲಿ ಫಲಿತಾಂಶ ಪರಿಣಾಮಕಾರಿಯಾಗಿದೆ.
ಮುಂಬೈನ ಪ್ರತಿಷ್ಠಿತ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ Jio World Convention Centre, NMACC ಶುಕ್ರವಾರ ಇದಕ್ಕೊಂದು ಅತ್ಯುತ್ತಮ ಸಾಕ್ಷಿಯಾಗಿ ಗೋಚರಿಸಿತು. ಮೂರು ದಿನಗಳ ಕಾಲ ನಡೆಯಲಿರುವ ‘AD Design Show 2026’ ನಿದರ್ಶನ ಎನ್ನುವಂತಿತ್ತು. ಏಷ್ಯಾದ ಅನೇಕ ವಿನ್ಯಾಸ ಕಂಪನಿಗಳು, ವಿನ್ಯಾಸಕಾರರ, ಗಣ್ಯರು, ವಿನ್ಯಾಸ ಪ್ರಿಯರು, ವಿಮರ್ಶಕರ ಸಮೂಹ ಪಾಲ್ಗೊಂಡಿತ್ತು. 200ಕ್ಕೂ ಹೆಚ್ಚು ಪ್ರದರ್ಶಕರ ಬೃಹತ್ ಪ್ರದರ್ಶನ ಇದಾಗಿತ್ತು. ದೃಶ್ಯ ಕಲಾವಿದರು ಮತ್ತು ವಿನ್ಯಾಸಕಾರರ ಅನ್ಯೋನ್ಯತೆಯ ವೇದಿಕೆಯಾಗಿತ್ತು.
+NINE ONE, Abhinav Goyal Studio / Abhinav Goyal, Abner, Dimore Surfaces, ARTSON, Baccarat, Bridge Bharat, Kunal Maniar and Associates: Quantra Surfaces, Duravit, Roca, Fenesta, Interio by Godrej, Jaipur Rugs, Maison Sia, and PortsideCafe Furniture Studio ಸೇರಿದಂತೆ ಕೆಲವು ಗ್ಯಾಲರಿ, ಕಲಾವಿದರೂ ಪ್ರದರ್ಶಕರಾಗಿದ್ದರು. ಬ್ರಾಂಡೆಡ್ ವಾಸ್ತು ವಿನ್ಯಾಸಕ ಕಂಪನಿಗಳ ಪಾಲ್ಗೊಳ್ಳುವಿಕೆ ಪ್ರದರ್ಶನದ ಮೌಲ್ಯ ಹೆಚ್ಚಿಸಿತ್ತು.
ಕೃತಕ ಬುದ್ಧಿಮತ್ತೆ (AI), ವರ್ಚುವಲ್ ರಿಯಾಲಿಟಿ (VR), ಮತ್ತು 3D ಮುದ್ರಣದಂತಹ ತಂತ್ರಜ್ಞಾನಗಳ ಬಳಕೆ ಗಮನಸೆಳೆಯಿತು. ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳ ಅನಿವಾರ್ಯತೆಯೂ ಆಗಿರುವುದನ್ನು ಪ್ರದರ್ಶನ ಮತ್ತೊಮ್ಮೆ ಸಾಬೀತುಪಡಿಸಿತು.
ಸ್ನೇಹಿತರೆ, ಈ ಪ್ರದರ್ಶನ ಡಿಸೆಂಬರ್ 4 ಮತ್ತು 5ರಂದು ಬೆಂಗಳೂರಿನ ಜಯಮಹಲ್ ಆವರಣದಲ್ಲಿ ನಡೆಯಲಿದೆ. ಆಸಕ್ತರು ಬಿಡುವು ಮಾಡಿಕೊಂಡು ಹೋಗಿಬನ್ನಿ. ಡಿಸೆಂಬರ್ 11, 12, 13 ರಂದು ಹೈದರಾಬಾದ್ ನಲ್ಲೂ ನಡೆಯಲಿದೆ.












