Art Mumbai 4th Edition has Raised Expectations

Share This

  • 94 prestigious Galleries from India and abroad
  • 21 International and 73 Indian exhibitors
The much-awaited contemporary art exhibition ‘Art Mumbai’ 4th edition will be held from November 12 to 15 at the Member’s Enclosure Premises of Mahalaxmi Racecourse in Mumbai.
‘Birla Opus’ has made all preparations for this prestigious art exhibition, and it is an important art exhibition for India. It is a matter of pride that it is also gaining a place among the world-renowned, attractive major Art Exhibitions.
94 prestigious Galleries from India and abroad will exhibit Artworks of their trusted artists. 21 international and 73 Indian exhibitors are the speciality of this edition. Large-scale sculpture Artworks of 13 talented artists will be exhibited in the Sculpture Park outside the gallery. There is no doubt that this is a golden opportunity to view the Artworks of leading artists of the contemporary context.
In the dream city Mumbai, which gives special status to art and artists, other art-related programmes will be held at this Art exhibition held every year. Artists, art critics, art promoters and art lovers will meet face-to-face. The sale of artworks will also take place on a large scale. It is for this very reason that Art Mumbai has gained greater importance.
| ನಿರೀಕ್ಷೆ ಹೆಚ್ಚಿಸಿದೆ ಆರ್ಟ್ ಮುಂಬೈ 4ನೇ ಆವೃತ್ತಿ |
ಬಹು ನಿರೀಕ್ಷೆಯ ಸಮಕಾಲೀನ ಕಲಾಕೃತಿಗಳ ಪ್ರದರ್ಶನ ‘Art Mumbai’ 4ನೇ ಆವೃತ್ತಿ ನವೆಂಬರ್ 12ರಿಂದ 15ರ ತನಕ ಮುಂಬೈನ ಮಹಾಲಕ್ಷ್ಮೀ ರೇಸ್ಕೋರ್ಸ್ Member’s Enclosure ಆವರಣದಲ್ಲಿ ನಡೆಯಲಿದೆ. Birla Opus ಈ ಪ್ರತಿಷ್ಠಿತ ಕಲಾಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಭಾರತದ ಮಟ್ಟಿಗೆ ಇದೊಂದು ಮಹತ್ವದ ಕಲಾಪ್ರದರ್ಶನವಾಗಿದೆ. ವಿಶ್ವಮನ್ನಣೆ, ಆಕರ್ಷಣೆಯ ಪ್ರಮುಖ ಕಲಾಪ್ರದರ್ಶನಗಳಲ್ಲಿ ಇದೂ ಒಂದು ಸ್ಥಾನ ಪಡೆದುಕೊಳ್ಳುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿ.
ಭಾರತ ಮತ್ತು ವಿದೇಶಗಳ ಪ್ರತಿಷ್ಠಿತ 94 ಗ್ಯಾಲರಿಗಳು ತಮ್ಮ ವಿಶ್ವಾಸಾರ್ಹ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಿವೆ. 21 ಅಂತಾರಾಷ್ಟ್ರೀಯ, 73 ಭಾರತೀಯ ಪ್ರದರ್ಶಕರು ಈ ಆವೃತ್ತಿಯ ವಿಶೇಷ. 13 ಪ್ರತಿಭಾನ್ವಿತ ಕಲಾವಿದರ ಬೃಹತ್ ಶಿಲ್ಪ ಕಲಾಕೃತಿಗಳು ಗ್ಯಾಲರಿ ಹೊರ ಆವರಣದ ಶಿಲ್ಪವನದಲ್ಲಿ (Sculpture Park) ಪ್ರದರ್ಶನವಾಗಲಿವೆ. ಸಮಕಾಲೀನ ಸಂದರ್ಭದ ಅಗ್ರಪಂಕ್ತಿಯ ಕಲಾವಿದರ ಕಲಾಕೃತಿಗಳನ್ನು ವೀಕ್ಷಿಸಲು ಇದೊಂದು ಸುವರ್ಣಾವಕಾಶ ಎನ್ನುವುದರಲ್ಲಿ ಯಾವ ಸಂದೇಹವಿಲ್ಲ.
ಕಲೆ, ಕಲಾವಿದರಿಗೆ ವಿಶೇಷ ಸ್ಥಾನಮಾನ ಇರುವ ಮಾಯಾನಗರಿ ಮುಂಬೈನಲ್ಲಿ ಪ್ರತಿವರ್ಷ ನಡೆಯುತ್ತಿರುವ ಪ್ರತಿಷ್ಠಿತ ಕಲಾಪ್ರದರ್ಶನದಲ್ಲಿ ಕಲೆಗೆ ಸಂಬಂಧಿಸಿದಂತೆ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ. ಕಲಾವಿದರು, ಕಲಾವಿಮರ್ಶಕರು, ಕಲಾಪ್ರಚಾರಕರು ಮತ್ತು ಕಲಾಸಕ್ತರು ಮುಖಾಮುಖಿ ಆಗಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಕಲಾಕೃತಿಗಳ ಮಾರಾಟ ಪ್ರಕ್ರಿಯೆಯೂ ನಡೆಯಲಿವೆ. ಇದೇ ಕಾರಣಕ್ಕಾಗಿಯೇ ಆರ್ಟ್ ಮುಂಬೈ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Share This

Leave a Reply

Your email address will not be published. Required fields are marked *