ಕಾಶಿಯ ಅಂಚು; ಶೆಣೈ ಸೃಷ್ಟಿಯ ಮಿಂಚು!

Share This

  • ಎರಡು ವಿಭಿನ್ನ ಭಾವಾಭಿವ್ಯಕ್ತಿಯ ಅವಿಚ್ಛಿನ್ನ ಕಲಾಪ್ರದರ್ಶನ
  • ನೋಟಕ್ಕೆ ಕಾಗದದ ಸೊಬಗು, ಭಾವಕ್ಕೆ ಭೂದೃಶ್ಯ ಅಮೂರ್ತ

‘ವಿಕ್ರಮ’ ವಾರಪತ್ರಿಕೆಯ ಮಾರ್ಚ್ 23ರ ಸಂಚಿಕೆಯಲ್ಲಿ ಪ್ರಕಟವಾದ ದೃಶ್ಯ ಅಂಕಣ ಬರಹ. ಜತೆ ಜೊತೆಗೆ ಒಂದಿಷ್ಟು ಕಲಾಕೃತಿಗಳ ಫೋಟೋಗಳು…

ಕನ್ನಡದ ನೆಲಕ್ಕೂ ಕಾಗದಕ್ಕೂ ಅವಿನಾಭಾವ ಸಂಬಂಧವಿದೆ. ಕಾಗದ ತಯಾರಿಕೆ ಕರ್ನಾಟಕ ರಾಜ್ಯಕ್ಕೆ ಹೊಸದಲ್ಲ. ಭದ್ರಾವತಿಯಲ್ಲಿ ಮೈಸೂರು ಪೇಪರ್ ಮಿಲ್ ಲಿಮಿಟೆಡ್ 1936ರಲ್ಲಿ ಪ್ರಾರಂಭಗೊಂಡಿತು. ಖಾಸಗಿ ಕಂಪನಿಯಾದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿಯಲ್ಲಿ ಕಾರ್ಯಾರಂಭ ಮಾಡಿತು. ಹೀಗೆ ಇನ್ನೂ ಇವೆ. ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ವರ್ಷಕ್ಕೆ 3.6 ಲಕ್ಷ ಟನ್ನಿಗೂ ಹೆಚ್ಚು ಕಾಗದ ವಸ್ತುಗಳನ್ನು ಉತ್ಪಾದಿಸುತ್ತಿದ್ದವು. ಕಾಗದ ಎಷ್ಟೋ ಕುಟುಂಬಗಳ ಉಸಿರಾಗಿತ್ತು.
ಕಾಗದ ತಯಾರಿಸಿ, ಅದನ್ನೇ ತಮ್ಮ ಕಲಾಕೃತಿಗಳಿಗೆ ಮಾಧ್ಯಮವಾಗಿ ಬಳಸಿಕೊಂಡಿರುವ ರವಿಕುಮಾರ್ ಕಾಶಿ Ravikumar Kashi ಅವರು ಈ ಕಾರಣಕ್ಕಾಗಿ ಆಪ್ತರಾಗುತ್ತಾರೆ. ಅವರ ‘ಅಂಚುಗಳಲ್ಲಿ ಅಂತ್ಯವಾಗದ ನಾವು / We don’t end at our edges’ ಕಲಾಪ್ರದರ್ಶನ Museum of Art and Photography ಗ್ಯಾಲರಿಯಲ್ಲಿ ನಡೆಯುತ್ತಿದೆ.

ಇನ್ನು ಗುರುದಾಸ್ ಶೆಣೈ Gurudas Shenoy ಅವರು ಕಲಾ ಕುಟುಂಬದ ಹಿನ್ನೆಲೆ ಕಾರಣಕ್ಕಾಗಿಯೂ ಮತ್ತು ಪ್ರಸಿದ್ಧ ಹಂಪೆಯ ಸೊಬಗನ್ನು ವಸ್ತುವಾಗಿಸಿಕೊಂಡು ಕಲಾಕೃತಿಗಳನ್ನು ರಚಿಸುವ ಕಾರಣಕ್ಕೂ ಹೃದಯಕ್ಕೆ ಹತ್ತಿರವಾಗುತ್ತಾರೆ. ತಂದೆ ಗೋಕುಲದಾಸ್ ಶೆಣೈ ಅವರು ಪ್ರಸಿದ್ಧ ಕಲಾವಿದರು. ಗುರುದಾಸ್ ಶೆಣೈ ಅವರ ಮಗಳು ರಾಕಿ ಶೆಣೃ ಕಲಾವಿದೆಯಾಗಿ, ಪತ್ನಿ ಅಮಿತಾ ಶೆಣೈ ಕಲಾ ಪೋಷಕಿಯಾಗಿ ಗುರುತಿಸಿಕೊಂಡಿದ್ದಾರೆ.
ಗುರುದಾಸ್ ಶೆಣೈ ಅವರ ‘Journeys Within’ ಕಲಾಪ್ರದರ್ಶನ ಇಂದಿರಾನಗರದ Artisera ಗ್ಯಾಲರಿಯಲ್ಲಿ ನಡೆಯುತ್ತಿದೆ.
ಇವೆರಡೂ ನೋಡಲೇಬೇಕಾದ ಕಲಾಪ್ರದರ್ಶನ. ಸದ್ಯಕ್ಕಿರುವ ಮಾಹಿತಿಯಂತೆ ರವಿಕುಮಾರ್ ಕಾಶಿ ಅವರ ಕಲಾಪ್ರದರ್ಶನ ಜೂನ್ 15ರಂದು ಸಂಪನ್ನಗೊಳ್ಳಲಿದೆ. ಗುರುದಾಸ್ ಶೆಣೈ ಅವರ ಕಲಾಪ್ರದರ್ಶನ ಮಾರ್ಚ್ 30ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಇಬ್ಬರೂ ಕಲಾವಿದರಿಗೆ ಹೃತ್ಪೂರ್ವಕ. ಅಭಿನಂದನೆಗಳು.

 

 

 

 

 

 

 


Share This

Leave a Reply

Your email address will not be published. Required fields are marked *