ಮೇ 6ರಿಂದ 10ರ ತನಕ ನಮ್ಮ ಆರ್ಟ್ ಬೆಂಗಳೂರು

Share This

• 2ನೇ ಆವೃತ್ತಿಗೆ ಚಿತ್ರಕಲಾ ಪರಿಷತ್ ಸಿದ್ಧತೆ
ಕರ್ನಾಟಕದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಇದೀಗ ‘ನಮ್ಮ ಆರ್ಟ್ ಬೆಂಗಳೂರು ನ್ಯಾಷನಲ್ ಆರ್ಟ್ ಫೇರ್’ 2ನೇ ಆವೃತ್ತಿಗೆ ಸಿದ್ಧತೆ ಮಾಡಿಕೊಂಡಿದೆ. ಮೇ 6ರಿಂದ ಮೇ 10ರ ತನಕ ನಡೆಯಲಿದ್ದು, ದೇಶದ ಬೇರೆ ಬೇರೆ ಭಾಗಗಳಿಂದ ನೂರಕ್ಕೂ ಹೆಚ್ಚು ಕಲಾವಿದರ 1000ಕ್ಕೂ ಹೆಚ್ಚು ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ನೋಡಲು ಸಾಧ್ಯವಿರುವುದಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ಹೇಳಿಕೊಂಡಿದೆ. ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
ಇದಲ್ಲದೆ, ಈ ಆವೃತ್ತಿಯಲ್ಲಿ ಕಲಾ ಇತಿಹಾಸಗಾರ್ತಿ ಲೀನಾ ವಿನ್ಸೆಂಟ್ ಅವರ ಕ್ಯುರೇಷನ್‌ನಲ್ಲಿ ಆಯ್ದ ಕಲಾವಿದರ ಕಲಾಕೃತಿಗಳ ‘MAPPING PERIPHERY & CENTRE: a pan-India dialogue’ ಪ್ರದರ್ಶನವೂ ಆಯೋಜನೆಯಾಗಿದೆ. ಈ ಕಲಾಪ್ರದರ್ಶನ ಮೇ ಇಪ್ಪತ್ತರಂದು ಸಂಪನ್ನಗೊಳ್ಳಲಿದೆ.
ಸ್ನೇಹಿತರೆ, ಬಿಡುವು ಮಾಡಿಕೊಂಡು ಭೇಟಿ ನೀಡಿ. ನಿಮಗಿಷ್ಟವಾಗುವ ಕಲಾಕೃತಿಗಳನ್ನು ಕೊಂಡುಕೊಳ್ಳುವ ಅವಕಾಶವಿದೆ.

Share This

Leave a Reply

Your email address will not be published. Required fields are marked *