ಚಲೋ ಅದ “ಚಾರ್ವಿ” ಕಲಾಪ್ರದರ್ಶನ!

Share This

  • ಪಂಥೀಯ ಧೋರಣೆಯ, ಸೈದ್ಧಾಂತಿಕ ನಿಲುವು ಪ್ರಕಟಿಸುವ ಕಲಾಕೃತಿಗಳು

” ಸಕ್ರಿಯ(active), ಅದೃಷ್ಟ(luck), ಸಮರ್ಥ(efficient), ಗಮನ(attention), ಆಧುನಿಕ(modern) “
ಇವೆಲ್ಲವೂ ಒಂದೆಡೆ ಸೇರಲು ಸಾಧ್ಯವೇ? ಸಾಧ್ಯ ಅನ್ನುವುದಾದರೆ ಎಲ್ಲಿ? ಹೇಗೆ ಸಾಧ್ಯ? ಅಂದಹಾಗೆ ಈ ಎಲ್ಲಾ ಗುಣಲಕ್ಷಣಗಳು ಒಳಗೊಂಡ ಯಾವುದಾದರೊಂದು ಪದ(word) ಸಿಗಬಹುದೇ?
ಈ ಮೇಲಿನ ಐದು ಪದಗಳ ಅರ್ಥ ಹುಡುಕುತ್ತಾ ಹೋದಾಗ ಪರಸ್ಪರ ಬಹಳ ಹತ್ತಿರವಾದುದು ಎಂದು ಹೇಳಲು ಸಾಧ್ಯವಾಗುವುದಿಲ್ಲ. ವಿಭಿನ್ನ ಅರ್ಥವನ್ನೇ ಹೊಂದಿವೆ. ಇನ್ನು, ಪ್ರಖಾಂಡ ಪಂಡಿತರು ಬೇರಿನ್ನಾವುದೋ ಆಧಾರ ನೀಡಿ ಹೇಳಬಹುದು. ಆದರೆ ಈ ಪದಗಳ ಬಳಕೆ ಬೇರೆ ಬೇರೆ ಸಂದರ್ಭಕ್ಕೆ ಅನುಸಾರವಾಗಿ ಬೇರೆ ಬೇರೆ ರೀತಿಯಲ್ಲೇ ಪ್ರಯೋಗಿಸುವುದುಂಟು. ಆದರೆ, ಈ ಎಲ್ಲಾ ಗುಣಲಕ್ಷಣ ಒಳಗೊಳ್ಳುವ ಪದ ” ಚಾರ್ವಿ” !!
ಕರ್ನಾಟಕ ಚಿತ್ರಕಲಾ ಪರಿಷತ್, ದೇವರಾಜು ಅರಸು ಗ್ಯಾಲರಿಯಲ್ಲಿ ಸಿಡ್ನಿಯ ಕಾರ್ ಸ್ಟ್ರೀಟ್ ಸ್ಟುಡಿಯೋಸ್ (car street studios) ಆಯೋಜನೆಯ ” ಚಾರ್ವಿ(Charvi)” ಸಮೂಹ ಕಲಾಪ್ರದರ್ಶನ (Group Exhibition) ನಡೆಯುತ್ತಿದೆ. ಕನ್ನಡಿಗರೇ ಆದ ವಸಂತ್ ರಾವ್ ಅವರು ಕಲಾಪ್ರದರ್ಶನ ಕ್ಯುರೇಟ್ ಮಾಡಿದ್ದಾರೆ.
ವಿಭಿನ್ನ ಧೋರಣೆಯೊಂದಿಗೆ ನೋಡುಗರನ್ನು ಸೆಳೆದು ನಿಲ್ಲಿಸಬಹುದಾದ ರಾಷ್ಟ್ರದ ನಾನಾ ಭಾಗಗಳ 22 ಕಲಾವಿದರ ಕಲಾಕೃತಿಗಳು ಈ ಪ್ರದರ್ಶನದ ವಿಶೇಷ. ಪಂಥೀಯ ಧೋರಣೆಯ, ಸೈದ್ಧಾಂತಿಕ ನಿಲುವು ಪ್ರಕಟಿಸುವ ಕಲಾಕೃತಿಗಳು ಹಾಗೂ ನವ್ಯ, ಸಮಕಾಲೀನ, ಸಮಕಾಲೀನೋತ್ತರ ಕಲಾಕೃತಿಗಳ ಜತೆ ಜೊತೆಗೆ ಹೊಸ ಅಲೆಯ ವಸ್ತು ಆಧರಿತ ಕಲಾಕೃತಿಗಳು ಗಮನ ಸೆಳೆಯುತ್ತವೆ. ಬಹಳ ಮುಖ್ಯವಾಗಿ ಕೆಲ ಕಲಾಕೃತಿಗಳಲ್ಲಿ ಶೈಲೀಕೃತ(Stylized), ಸ್ವಂತಿಕೆ(Originality) ಪ್ರದರ್ಶಿಸುವ ಪ್ರಯತ್ನದಲ್ಲಿ ತಾವೇ ತಮ್ಮ ಸುತ್ತ ಬೇಲಿ ಹಾಕಿಕೊಂಡಿರುವಂತೆ ಭಾಸವಾದರೂ ಅಚ್ಚರಿ ಇಲ್ಲ. ಸಾಮರ್ಥ್ಯವಿದ್ದೂ ಅದರಾಚೆಗಿನ ಸಾಧ್ಯತೆಯತ್ತ ಹೊರಳಿಕೊಳ್ಳುವ, ಪ್ರಯೋಗಶೀಲರಾಗುವ ವೇಗಕ್ಕೆ ಕಡಿವಾಣ ಹಾಕಿಕೊಂಡಿರುವಂತೆ ಕಾಣಿಸುತ್ತದೆ. ಇನ್ನು ಕಲಾವಿದರ ನಿರ್ವಹಣೆ ವಿಚಾರದಲ್ಲಿ ತುಟಿಪಿಟಿಕ್ ಎನ್ನದ ರೀತಿಯ ಶಿಸ್ತು ಶ್ಲಾಘನಾರ್ಹ.
ಈ ಮೊದಲೇ ಹೇಳಿರುವಂತೆ, “ಚಾರ್ವಿ” ಸಮೂಹದಲ್ಲಿ ಕಲಾಕೃತಿಗಳ ರಚನೆಯಲ್ಲಿ ಸಕ್ರೀಯ(active)ವಾಗಿ ತೊಡಗಿಸಿಕೊಂಡಿರುವುದನ್ನು ಪ್ರತಿಪಾದಿಸುವ ಕಲಾಕೃತಿಗಳಿವೆ. ಅದೃಷ್ಟ(luck)ವಂತ ಕಲಾಕೃತಿಗಳಿವೆ.
ಸಮರ್ಥ(efficient)ನೀಯ ಕಲಾಕೃತಿಗಳೂ ಇವೆ. ಗಮನ(attention) ಸೆಳೆಯಬಲ್ಲ ಮತ್ತು ಆಧುನಿಕ(modern)ಯ ಪಥದಲ್ಲಿ, ಅದರಾಚೆಗಿನ ವಿಭಿನ್ನ ನೆಲೆಯಲ್ಲಿ ನಿಲ್ಲುವ ಕಲಾಕೃತಿಗಳು ಇವೆ.
Friends, ಕಲಾಪ್ರದರ್ಶನ ಮಾರ್ಚ್ 31 ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.

 

 

 


Share This

Leave a Reply

Your email address will not be published. Required fields are marked *