• ಜೂನ್ 17ರಂದು ಸಂಪನ್ನ, ಹೋಗಿ ಬನ್ನಿ
ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ದೃಶ್ಯ ಕಲಾ ವಿಭಾಗ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಗ್ಯಾಲರಿಯಲ್ಲಿ ‘ಸ್ವಾಭಿಮಾನ ಭಾರತ – ಸಂವಿಧಾನ 75’ ಶೀರ್ಷಿಕೆಯಡಿ ಸಮೂಹ ಕಲಾಪ್ರದರ್ಶನ ಆಯೋಜಿಸಿದೆ. ಚಂದ್ರನಾಥ್ ಆಚಾರ್ಯ, ವಿ.ಹರಿರಾಂ, ಯು.ಭಾಸ್ಕರ್ ರಾವ್, ಎ.ಎಂ.ಪ್ರಕಾಶ್, ಪ್ರಹ್ಲಾದ್ ಆಚಾರ್ಯ, ಜಯರಾಮ ಬಿ., ಲಿಂಗದೇವರು ಸೇರಿದಂತೆ ಅನೇಕ ಹಿರಿಯ-ಕಿರಿಯ ಕಲಾವಿದರ ಕಲಾಕೃತಿಗಳ ಸಮಾಗಮ ವಾಗಿದೆ.
ಅನೇಕ ಕಲಾವಿದರು ತಮ್ಮ ಎಂದಿನ ಶೈಲಿ ಅಥವಾ ಅಭ್ಯಾಸ ಕ್ರಮಕ್ಕಿಂತ ಭಿನ್ನವೆನಿಸುವ ರೀತಿಯಲ್ಲಿ ಕಲಾಕೃತಿ ರಚಿಸಿರುವುದು ಗಮನ ಸೆಳೆಯಿತು. ಸಮಕಾಲೀನ ಕಲಾ ಕ್ರಾಂತಿ ಸಾಂಪ್ರದಾಯಿಕ ಕಲಾವಿದರಲ್ಲೂ ಒಂದೂ ಹೊಸ ಪ್ರಯತ್ನಕ್ಕೆ ಪ್ರಚೋದನೆ ನೀಡಿರುವುದು ಸ್ವಾಗತಾರ್ಹ. ಭಾರತೀಯ ಸಂಸ್ಕಾರ ಸಮಾ’ಗಮ’ಕ್ಕೆ ಸಾಕ್ಷಿಯಾಗುವಂತಹ ಪ್ರಯತ್ನ ನಡೆದಿರುವುದು ಶ್ಲಾಘನೀಯ.
ಸಂಸ್ಕಾರ ಭಾರತಿ ವಿಶ್ವ ಮಟ್ಟದಲ್ಲಿ ತನ್ನದೇ ಆದ ಒಂದು ಛಾಪು ಮೂಡಿಸಿರುವ ಸಂಸ್ಥೆಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಘಟನಾತ್ಮಕ ಕಲಾಪ್ರದರ್ಶನಕ್ಕೆ ವೇದಿಕೆ ಒದಗಿಸಲಿದೆ, ಆಯೋಜನೆಯ ಉತ್ಸಾಹ ತೋರಲಿದೆ ಎಂದು ಆಶಿಸೋಣ. ಕಲಾವಿದರು, ಕಲಾ ಸಂಘಟಕರಾದ ಗಣಪತಿ ಎಸ್ ಹೆಗಡೆ (Ganapathi S Hegde) ಅವರು ಈ ಕಲಾಪ್ರದರ್ಶನದ ಆಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಸ್ನೇಹಿತರೆ, ಕಲಾಪ್ರದರ್ಶನ ಜೂನ್ 17ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.














